ಕಾಪು; ‘ಝೀಝೊ’ ಎಜುಕೇಶನ್ ಅಕಾಡೆಮಿ ಉದ್ಘಾಟನೆ
ಕಾಪು: ನಗರದ ಬಂಟಕಲ್ ನಲ್ಲಿ ನೂತನವಾಗಿ ಆರಂಭಗೊಂಡಿರುವ ‘ಝೀಝೊ’ ಎಜುಕೇಶನ್ ಅಕಾಡೆಮಿಯು ಜ.1ರಂದು ಉದ್ಘಾಟನೆಗೊಂಡಿತು.
ಶಿಕ್ಷಣ ಸಂಸ್ಥೆಯನ್ನು ಝೀಝೊ ಸಹೋದರಿಯರಾದ ಝಿಯಾ ಮತ್ತು ಝೋಯ್ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನ ಪ್ರಿನ್ಸಿಪಲ್ ಡಾ. ಪ್ರವೀಣ್ ಮಾರ್ಟೀಸ್ ಹಾಗೂಕಲ್ಯಾಣಪುರ ಮಿಲಾಗ್ರೀಸ್ ಕಾಲೇಜಿನ ಪ್ರಿನ್ಸಿಪಲ್ ಡಾ. ವಿನ್ಸೆಂಟ್ ಆಳ್ವಾ ಮಾತನಾಡಿ, ಶಾಲೆಯನ್ನು ಉತ್ತಮ ರೀತಿಯಲ್ಲಿ ನಡೆಸಿಕೊಂಡು ಉತ್ತಮ ಹೆಸರುಗಳಿಸುವಂತೆ ಶುಭ ಹಾರೈಸಿ, ಮಾರ್ಗ ದರ್ಶನ ನೀಡಿದರು.
ಮಾಜಿ ಕಾಪು ಶಾಸಕ ವಿನಯ್ ಕುಮಾರ್ ಸೊರಕೆ ಮಾತನಾಡಿ, ಈ ಭಾಗದಲ್ಲಿ ಶೈಕ್ಷಣಿಕ ಸಂಸ್ಥೆಯ ಅಗತ್ಯವಿದ್ದು ಸರಿಯಾದ ಸಮಯದಲ್ಲಿ ಝೀಝೊ ಎಜುಕೇಶನ್ ಸಂಸ್ಥೆ ಆರಂಭಗೊಂಡಿದೆ. ಈ ಸಂಸ್ಥೆ ಮುಂದಿನ ದಿನಗಳಲ್ಲಿ ಶೈಕ್ಷಣಿಕವಾಗಿ ಉತ್ತಮ ರೀತಿಯಲ್ಲಿ ಅಭಿವೃದ್ಧಿ ಸಾಧಿಸಲಿ ಎಂದು ಶುಭ ಹಾರೈಸಿದರು.
ಸಮಾರಂಭದಲ್ಲಿ ಪಾಂಬೂರು ಚರ್ಚ್ ನ ಧರ್ಮಗುರು ವಂ. ಹೆನ್ರಿ ಮಸ್ಕರೇನಸ್ ಆಶಿರ್ವಚನ ನೀಡಿದರು. ಈ ಸಂದರ್ಭದಲ್ಲಿ ಉದ್ಯಮಿ ಮಾಧವ ಕಾಮತ್, ಶಿರ್ವ ಗ್ರಾಮ ಪಂಚಾಯತ್ ಸದಸ್ಯ ರಾಮರಾಯ ಪಾಟ್ಕರ್, ಝೀಯೊ ಎಜುಕೇಶನ್ ಅಕಾಡೆಮಿಯ ಮಾಲಕರಾದ ರಿಚ್ಚಿ ಡಿ ಸೋಜಾ, ವಿದ್ಯಾಶ್ರೀ ಆಚಾರ್ಯ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
ಝೀಝೊ ಶಾಲೆಯಲ್ಲಿ ಮಕ್ಕಳಿಗೆ ಬೇಕಾದ ಮೂಲಭೂತ ಸೌಕರ್ಯದ ಜೊತೆಗೆ ಉತ್ತಮ ಗುಣಮಟ್ಟದ ಅಗತ್ಯ ಸೌಲಭ್ಯಗಳು ಇದ್ದು, ಈಗಾಗಲೇ ರಿಜಿಸ್ಟ್ರೇಶನ್ ಆರಂಭಗೊಂಡಿದೆ. ಇದರ ಜೊತೆಗೆ ಜನವರಿಯಲ್ಲಿ ನೋಂದಣಿ ಮಾಡಿಕೊಂಡವರಿಗೆ ವಿಶೇಷ ಆಫರ್ ಕೂಡಾ ಇದೆ. ಹಾಗಾಗಿ ಆಸಕ್ತರು ತಮ್ಮ ಮಕ್ಕಳ ದಾಖಲಾತಿಗೆ ಕೂಡಲೇ ನೋಂದಾಯಿಸಿಕೊಂಡು, ಶಾಲೆಯ ಪ್ರಯೋಜನ ಪಡೆದುಕೊಳ್ಳುವಂತೆ ಝೀಝೊ ಶಿಕ್ಷಣ ಸಂಸ್ಥೆ ತಿಳಿಸಿದೆ.