ಗುಜರಾತ್ -ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆ ಮುನ್ನಡೆ ಹಾದಿಯಲ್ಲಿ ಬಿಜೆಪಿ
ಶಿಮ್ಲಾ ಡಿ.8 : ಗುಜರಾತ್ ಹಾಗೂ ಹಿಮಾಚಲ ಪ್ರದೇಶದ ಚುನಾವಣೆಯ ಮತ ಎಣಿಕೆ ಆರಂಭವಾಗಿದೆದ್ದು ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ.
ಆಡಳಿತಾರೂಢ ಬಿಜೆಪಿ ಹಿಮಾಚಲ ಪ್ರದೇಶದಲ್ಲಿ ಮತ್ತೊಮ್ಮೆ ಅಧಿಕಾರ ಪಡೆಯುವ ಹಾದಿಯಲ್ಲಿದ್ದು, ಕಾಂಗ್ರೆಸ್‍ನಿಂದ ಪ್ರಬಲ ಪೈಫೋಟಿ ಎದುರಿಸುತ್ತಿದೆ. ಪ್ರಾರಂಭಿಕ ಸುತ್ತಿನ ಮತ ಎಣಿಕೆಯಲ್ಲಿ (10 ಗಂಟೆ) ಬಿಜೆಪಿ 33 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದರೆ ಕಾಂಗ್ರೆಸ್ 32 ಕ್ಷೇತ್ರಗಳಲ್ಲಿ ಪ್ರಾಬಲ್ಯ ಸಾಧಿಸಿದೆ. ಈಗಿನ ಮತ ಎಣಿಕೆ ಟ್ರೆಂಡ್‍ನಂತೆ ಇಬ್ಬರು ಪಕ್ಷೇತರರು ಗೆಲುವಿನ ಹಾದಿಯಲ್ಲಿದ್ದಾರೆ. ಒಂದು ಸ್ಥಾನ ಸಿಪಿಐ- ಎಂ ಪಾಲಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಬಿಜೆಪಿ ಹಾಲಿ ಮುಖ್ಯಮಂತ್ರಿ ಜೈರಾಂ ಠಾಕೂರ್ 14 ಸಾವಿರ ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಬಿಜೆಪಿಯ ಅನಿಲ್ ಶರ್ಮಾ, ಕಾಂಗ್ರೆಸ್‍ನ ವಿಕ್ರಮಾದಿತ್ಯ ಸಿಂಗ್ ಮುನ್ನಡೆ ಕಾಯ್ದುಕೊಂಡಿದ್ದಾರೆ. ಅಚ್ಚರಿಯೆಂಬಂತೆ ಕಾಂಗ್ರೆಸ್ ಮುಖಂಡ ರೋಹಿತ್ ಠಾಕೂರ್ ಹಿನ್ನಡೆ ಅನುಭವಿಸಿದ್ದಾರೆ. ಬಿಜೆಪಿ ಸುರೇಶ್ ಭಾರಧ್ವಜ್ ಕೂಡ ಹಿನ್ನಡೆ ಅನುಭವಿಸಿದ್ದಾರೆ.
68 ಕ್ಷೇತ್ರಗಳಿರುವ ರಾಜ್ಯದಲ್ಲಿ ಅಧಿಕಾರ ಪಡೆಯಲು 35 ಸ್ಥಾನಗೆಲ್ಲಬೇಕಿದೆ. ಎರಡು ಪಕ್ಷದ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಬಿಜೆಪಿ ಮತ್ತೆ ಎರಡನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿದು ಇತಿಹಾಸ ಸೃಷ್ಟಿಸುವ ಕಡೆ ಸಾಗಿದೆ.
ಮತ್ತೊಂದೆಡೆ ಗುಜರಾತ್ ನಲ್ಲಿ ಆರಂಭಿಕ ಮತ ಎಣಿಕೆ ಯಲ್ಲಿ ಬಿಜೆಪಿ 147, ಕಾಂಗ್ರೆಸ್ 27, ಎಎಪಿ 9 ಹಾಗೂ ಇತರ 4 ಕ್ಷೇತ್ರದಲ್ಲಿ ಮುನ್ನಡೆಯಲ್ಲಿದ್ದವು.
ಗುಜರಾತ್ ನಲ್ಲಿ ಬಿಜೆಪಿಯ ಹಾರ್ದಿಕ್ ಪಾಟೇಲ್ ಮುನ್ನಡೆಯಲ್ಲಿದ್ದರೆ ಕಾಂಗ್ರೆಸ್ ನ ಭರ್ವಾಡ್ ಗೆ ಹಿನ್ನಡೆಯಾಗಿದೆ. ಹಾಗೂ ಗುಜರಾತ್‍ನ ಬಿಜೆಪಿ ಮುಖ್ಯಮಂತ್ರಿ ಭೊಪೇಂದ್ರ ಪಟೇಲ್ 23 ಸಾವಿರ ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.
ಎರಡೂ ರಾಜ್ಯಗಳ ಮತ ಎಣಿಕೆಯಲ್ಲಿ ಜಿದ್ದಾಜಿದ್ದಿನ ಫೈಟ್ ಕಂಡು ಬರುತ್ತಿದ್ದು ಅಂತಿಮ ಫಲಿತಾಂಶದತ್ತ ಎತ್ತರ ಚಿತ್ತ ನೆಟ್ಟಿದೆ.