ಜೆಎನ್‍ಯು ಕ್ಯಾಂಪಸ್ ಗೋಡೆಗಳ ಮೇಲೆ ವಿವಾದಾತ್ಮಕ ಬರಹ: ಘಟನೆ ಖಂಡಿಸಿದ ಕುಲಪತಿ

ನವದೆಹಲಿ ಡಿ.2 : ಜವಹರಲಾಲ್ ನೆಹರು ವಿಶ್ವ ವಿದ್ಯಾಲಯದ ಗೋಡೆಗಳ ಮೇಲೆ ಬ್ರಾಹ್ಮಣ ಮತ್ತು ಬನಿಯಾ ಸಮುದಾಯಗಳ ವಿರುದ್ಧದ ಘೋಷಣೆಗಳನ್ನೊಳಗೊಂಡ ವಿವಾದಾತ್ಮಕ ಬರಹಗಳು ಕಂಡು ಬಂದಿವೆ.

ಕಳೆದ ರಾತ್ರಿ ಸ್ಕೂಲ್ ಆಫ್ ಇಂಟರ್‍ನ್ಯಾಶನಲ್ ಸ್ಟಡೀಸ್-11 ಕಟ್ಟಡದ ಗೋಡೆಗಳ ಮೇಲೆ ಈ ಬರಹಗಳನ್ನು ಬರೆಯಲಾಗಿದ್ದು, “ಬ್ರಾಹ್ಮಣರು ಕ್ಯಾಂಪಸ್ ತೊರೆಯಿರಿ”, “ರಕ್ತವಿದೆ”, “ಬ್ರಾಹ್ಮಣ ಭಾರತ್ ಛೋಡೋ” ಮತ್ತು “ಬ್ರಾಹ್ಮಿನೋ-ಬನಿಯಾಸ್, ನಾವು ನಿಮಗಾಗಿ ಬರುತ್ತಿದ್ದೇವೆ! ನಾವು ಸೇಡು ತೀರಿಸಿಕೊಳ್ಳುತ್ತೇವೆ” ಎಂದು ಬರೆಯಲಾಗಿದೆ. ಇದೀಗ ಬರಹಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಇನ್ನು ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಕುಲಪತಿ ಶಾಂತಿ ಶ್ರೀ ಡಿ. ಪಂಡಿತ್ ಅವರು, ವಿಭಾಗದ ಕುಂದುಕೊರತೆಗಳ ಸಮಿತಿಯ ಡೀನ್ ಅವರಿಂದ ಈ ಬಗ್ಗೆ ವರದಿ ಕೇಳಿದ್ದಾರೆ. ಅಲ್ಲದೇ ಕ್ಯಾಂಪಸ್ ನಲ್ಲಿ ಈ ಪ್ರತ್ಯೇಕವಾದ ಪ್ರವೃತ್ತಿಯನ್ನು ಖಂಡಿಸುತ್ತೇವೆ. ಜೆಎನ್‍ಯು ಎಲ್ಲರಿಗೂ ಸೇರಿದ್ದು, ಇಂತಹ ಘಟನೆಗಳನ್ನು ಸಹಿಸುವುದಿಲ್ಲ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!