ಕಾಂತಾರಕ್ಕೆ ಅರ್ಧ ಶತಕದ ಸಂಭ್ರಮ: ಪಂಜುರ್ಲಿ-ಗುಳಿಗ ದೈವದ ಆಶಿರ್ವಾದ : ರಿಷಬ್ ಶೆಟ್ಟಿ

ಉಡುಪಿ ನ.18 : ಭರ್ಜರಿ ಶಸಸ್ಸಿನತ್ತ ಮುನ್ನುಗ್ಗುತ್ತಿರುವ ರಿಷಬ್ ಶೆಟ್ಟಿ ಅವರ ಕಾಂತಾರ ಚಿತ್ರ 50 ದಿನಗಳನ್ನು ಪೂರೈಸಿದೆ.
ತಮ್ಮ ಚಿತ್ರ 50 ದಿನ ಪೂರೈಸಿ ಯಶಸ್ಸಿಯಾಗಿ ಮುನ್ನುಗ್ಗುತ್ತಿರುವ ಸಂಭ್ರಮದ ಬಗ್ಗೆ ಟ್ವಿಟ್ ಮಾಡಿ ಸಂತೋಷವನ್ನು ಹಂಚಿಕೊಂಡಿರುವ ನಟ ನಿರ್ದೇಶಕ ರಿಷಬ್ ಶೆಟ್ಟಿ ಅವರು,” ನಮಗೆ ದಿವ್ಯ ಸಂಭ್ರಮದ ಕ್ಷಣ. ಜಗತ್ತಿನಾದ್ಯಂತ ಎಲ್ಲರಿಗೂ ಧನ್ಯವಾದಗಳು. ಇದು ನಮ್ಮಲ್ಲಿ ಪ್ರತಿಯೊಬ್ಬರಿಂದ ಅಂಗೀಕರಿಸಲ್ಪಟ್ಟಿದೆ, ಒಡೆತನ ಹೊಂದಿದೆ ಮತ್ತು ವಾಸಿಸುತ್ತಿದೆ. ಪಂಜುರ್ಲಿ ಮತ್ತು ಗುಳಿಗ ದೈವದಿಂದ ನಾವು ನಿಜವಾಗಿಯೂ ಆಶೀರ್ವದಿಸಲ್ಪಟ್ಟಿದ್ದೇವೆ. ಆವೇಶವು ಅಜೇಯವಾಗಿ ಉಳಿದಿದೆ” ಎಂದಿದ್ದಾರೆ.
ಕಾಂತಾರ ತನ್ನ ಮೊದಲ 49 ದಿನಗಳಲ್ಲಿ ಬಾಕ್ಸ್ ಆಫೀಸ್‍ನಲ್ಲಿ ಉತ್ತಮ ಪ್ರದರ್ಶನ ನೀಡಿದೆ ಮತ್ತು ಭಾರತದಲ್ಲಿ ಸರಿಸುಮಾರು 294.89 ಕೋಟಿ ರೂ ನಿವ್ವಳ ಲಾಭ ಗಳಿಸಿದೆ. ವಿಶ್ವದಾದ್ಯಂತ ಈ ಚಿತ್ರವು 370 ಕೋಟಿ ಗೂ ಅಧಿಕ ಗಳಿಕೆ ಮಾಡಿದೆ ಎಂದು ವರದಿಗಳಿಂದ ತಿಳಿದು ಬಂದಿದೆ.