ಗ್ರಾಹಕರಿಗೆ 985 ಕೋಟಿ ರೂ. ಮರುಪಾವತಿ ನೀಡಿ: ಏರ್ ಇಂಡಿಯಾಗೆ ಅಮೆರಿಕ ಸರ್ಕಾರ ಆದೇಶ
ವಾಷಿಂಗ್ಟನ್ ನ.15 : ಪ್ರಯಾಣಿಕರಿಗೆ ನೀಡಬೇಕಾಗಿರುವ ಸುಮಾರು 985 ಕೋಟಿ ಮರುಪಾವತಿ ನೀಡಿ ಎಂದು ಅಮೆರಿಕ ಸಾರಿಗೆ ಸಚಿವಾಲಯವು ಟಾಟಾ ಸಮೂಹ ಮಾಲೀಕತ್ವದ ಏರ್ ಇಂಡಿಯಾಗೆ ಆದೇಶಿಸಿದೆ.
ಏರ್ ಇಂಡಿಯಾ ಸೇರಿ ಒಟ್ಟು 6 ವಿಮಾನಯಾನ ಕಂಪನಿಗಳಿಗೆ 4885 ಕೋಟಿ ಮಿಲಿಯನ್ ಡಾಲರ್ ಗ್ರಾಹಕರಿಗೆ ಮರುಪಾವತಿ ಮಾಡಬೇಕು ಎಂದು ಅಮೆರಿಕದ ಸಾರಿಗೆ ಸಚಿವಾಲಯ ನಿರ್ದೇಶಿಸಿದೆ. ಹಾಗೂ ಮರುಪಾವತಿ ವಿಳಂಬ ಮಾಡಿದ್ದಕ್ಕೆ ಸುಮಾರು 11.40 ಕೋಟಿ ದಂಡವನ್ನೂ ವಿಧಿಸಿದೆ.
ವಿಮಾನ ರದ್ದಾದಾಗ ಅಥವಾ ವಿಮಾನ ಬದಲಾವಣೆಯಾದಾಗ ವಿಮಾನಯಾನ ಕಂಪನಿಗಳು ಗ್ರಾಹಕರಿಗೆ ಟಿಕೆಟ್ ಮೊತ್ತವನ್ನು ಮರುಪಾವತಿಮಾಡಬೇಕು. ಆದರೆ ಮಾರುಪಾವತಿಗೆ ಏರ್ ಇಂಡಿಯಾ ವಿಳಂಬ ಮಾಡಿದೆ. ಹೀಗಾಗಿ ಮರುಪಾವತಿಮೊತ್ತದ ಜತೆಗೆ ದಂಡವನ್ನೂ ಪಾವತಿಸಿ ಎಂದು ಏರ್ ಇಂಡಿಯಾಗೆ ಆದೇಶಿಸಲಾಗಿದೆ.
ಮರುಪಾವತಿ ಸಂಬಂಧ ಏರ್ ಇಂಡಿಯಾ ವಿರುದ್ಧ ಸಲ್ಲಿಕೆಯಾಗಿದ್ದ 1900 ದೂರುಗಳ ಪೈಕಿ, ಶೇ 50ಕ್ಕೂ ಹೆಚ್ಚು ಗ್ರಾಹಕರಿಗೆ ಮರುಪಾವತಿಮಾಡಲು 100ಕ್ಕೂ ಅಧಿಕ ದಿನಗಳನ್ನು ತೆಗೆದುಕೊಂಡಿತ್ತು ಎಂದು ತನಿಖೆಯಿಂದ ತಿಳಿದು ಬಂದಿದೆ.
Good decision