ಕಾಂತಾರ ಗೆಟಪ್ ನಲ್ಲಿ ಬಂದ ತಹಶೀಲ್ದಾರ್…!

ಆಂದ್ರ ಪ್ರದೇಶ ನ.15 : ಕಾಂತಾರ ಚಿತ್ರದ ಪ್ರಭಾವ ಎಲ್ಲೆಡೆ ಬೀರುತ್ತಿದೆ. ಈ ಚಿತ್ರ ರಾಜ್ಯದಲ್ಲಿ ಮಾತ್ರವಲ್ಲದೆ ನೆರೆಯ ರಾಜ್ಯಗಳಲ್ಲೂ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಇದಕ್ಕೆ ಆಂದ್ರ ಪ್ರದೇಶದಲ್ಲಿ ನಡೆದ ಕಾರ್ಯಕ್ರಮವೊಂದು ಉತ್ತಮ ನಿದರ್ಶನವಾಗಿದೆ.

ಗುಂಟೂರಿನ ನಾಗಾರ್ಜುನ ಯೂನಿವರ್ಸಿಟಿಯಲ್ಲಿ ಆಂಧ್ರ ಪ್ರದೇಶ ತೆರಿಗೆ ಇಲಾಖೆಯ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಹಲವು ಅಧಿಕಾರಿಗಳು ಭಾಗಿಯಾಗಿದ್ದರು. ಈ ವೇಳೆ ವಿಜಯನಗರಂ ಜಿಲ್ಲೆಯ ತಹಶೀಲ್ದಾರ್ ಪ್ರಸಾದ್ ರಾವ್ ಅವರು `ಕಾಂತಾರ' ಸಿನಿಮಾದ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರನ್ನು ಈ ಅವತಾರದಲ್ಲಿ ಕಂಡು ಅಲ್ಲಿದ್ದ ಎಲ್ಲರಿಗೂ ಅಚ್ಚರಿ ಆಗಿದೆ. ಈ ವೇಳೆ ಅವರು `ಕಾಂತಾರ’ ಚಿತ್ರದ ಡೈಲಾಗ್ ಕೂಡ ಹೇಳಿದ್ದಾರೆ ಎನ್ನಲಾಗಿದೆ.

ಇನ್ನು ತಹಶೀಲ್ದಾರ್ ಪ್ರಸಾದ್ ರಾವ್ ಅವರಿಗೆ ಕಲೆಯಲ್ಲಿ ಹೆಚ್ಚು ಆಸಕ್ತಿ ಇದೆ. ಹಾಗಾಗಿ ಅವರು ಈ ಕಾರ್ಯಕ್ರಮಕ್ಕೆ ‘ಕಾಂತಾರ’ ಚಿತ್ರದ ರೀತಿ ವೇಷ ಹಾಕಿಕೊಂಡು ಬಂದಿದ್ದರು. ಅವರನ್ನು ನೋಡಿ ಜಿಲ್ಲಾಧಿಕಾರಿಗೂ ಅಚ್ಚರಿ ಆಗಿದ್ದು, ಅವರು ಕೂಡ ಇಂಪ್ರೆಸ್ ಆಗಿದ್ದು, ತಹಶೀಲ್ದಾರ್ ಜೊತೆ ಸೆಲ್ಫಿ ತೆಗೆದುಕೊಂಡಿದ್ದಾರೆ ಎಂದು ಮಾಧ್ಯಮ ವರದಿಯಿಂದ ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!