ನಾಳೆಯಿಂದ ನಂದಿನಿ ಹಾಲಿನ ದರ ಏರಿಕೆ

ಬೆಂಗಳೂರು ನ.14 : ಹಲವು ಸಮಯದ ಮನವಿಗಳ ಬಳಿಕ ರಾಜ್ಯದಲ್ಲಿ ನಂದಿನಿ ಹಾಲಿನ ದರ ಮೂರು ರೂಪಾಯಿ ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಅದರಂತೆ ನಾಳೆಯಿಂದ ನಂದಿನಿ ಬ್ರ್ಯಾಂಡ್ ನ ಎಲ್ಲಾ ವಿಧದ ಹಾಲುಗಳ ಬೆಲೆ ಮೂರು ರೂಪಾಯಿ ಹೆಚ್ಚಳವಾಗಲಿದೆ. ಹಾಗೂ ಮೊಸರು ದರ ಕೂಡ ಮೂರು ರೂಪಾಯಿ ಹೆಚ್ಚಳವಾಗಲಿದೆ ಎಂದು ತಿಳಿದು ಬಂದಿದೆ.

ಹಾಲು ಮಂಡಳಿಗಳು ಕಳೆದ ಹಲವು ತಿಂಗಳಿನಿಂದ ಸರಕಾರಕ್ಕೆ ಹಾಲಿನ ದರ ಹೆಚ್ಚಳ ಮಾಡುವಂತೆ ಮನವಿ ಮಾಡುತ್ತಿತ್ತು. ಇದೀಗ ಹಾಲಿನ ದರ ಹೆಚ್ಚಳವಾಗಿದ್ದು, ಹಾಲಿನ ದರ ಹೆಚ್ಚಳದಿಂದ ಬರುವ ಹಣವನ್ನು ರೈತರಿಗೆ ನೀಡುವುದಾಗಿ ಕೆ.ಎಂ.ಎಫ್ ಹೇಳಿದೆ ಎಂಬ ಮಾಹಿತಿ ಲಭ್ಯವಾಗಿದೆ.

Leave a Reply

Your email address will not be published.

error: Content is protected !!