ದ್ವಿಚಕ್ರ ವಾಹನಗಳ ನಡುವೆ ಡಿಕ್ಕಿ : ಓರ್ವ ಸ್ಕೂಟರ್ ಸವಾರ ಸಾವು
ಬೆಳ್ತಂಗಡಿ: ಎರಡು ದ್ವಿಚಕ್ರ ವಾಹನಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಯುವಕನೋರ್ವ ಮೃತಪಟ್ಟ ಘಟನೆ ನಡ ಗ್ರಾಮದ ಕೆಳಗಿನ ಮಂಜೊಟ್ಟಿ ಎಂಬಲ್ಲಿ ನಿನ್ನೆ ರಾತ್ರಿ ನಡೆದಿದೆ. ಮಲವಂತಿಗೆ ಗ್ರಾಮದ ಗೋಪಾಲ ಕೃಷ್ಣ(19) ಮೃತಪಟ್ಟವರು.
ಬೆಳ್ತಂಗಡಿಯಿಂದ ನಾವೂರು ಕಡೆಗೆ ಚಲಿಸುತ್ತಿದ್ದ ಬೈಕ್ ಹಾಗೂ ಕಿಲ್ಲೂರಿನಿಂದ ಬೆಳ್ತಂಗಡಿಯ ಕಡೆಗೆ ಬರುತ್ತಿದ್ದ ಸ್ಕೂಟರ್ ನಡುವೆ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಅಪಘಾತದಲ್ಲಿ ಗಂಭೀರ ಗಾಯಗೊಂಡ ಗೋಪಾಲಕೃಷ್ಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ದಾರಿಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಅಪಘಾತದಲ್ಲಿ ಇನ್ನೋಂದು ಬೈಕ್ ಸವಾರ ಪ್ರದೀಶ್ ಅವರಿಗೂ ಗಾಯಗಳಾಗಿದ್ದು ಅವರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಬೆಳ್ತಂಗಡಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮೂಲಗಳು ತಿಳಿಸಿವೆ.