ಮಲ್ಪೆ: ದೀಪಾವಳಿಯ ಹಣತೆಯ ಬೆಂಕಿ ಹತ್ತಿಕೊಂಡು ಮಹಿಳೆ ಮೃತ್ಯು

ಮಲ್ಪೆ ನ.12 (ಉಡುಪಿ ಟೈಮ್ಸ್ ವರದಿ) : ದೀಪಾವಳಿ ಹಬ್ಬದ ಸಲುವಾಗಿ ಮನೆಯ ಅಂಗಳದಲ್ಲಿ ಹಚ್ಚಿದ್ದ ಹಣತೆಯ ಬೆಂಕಿ ಸೀರೆಗೆ ಹತ್ತಿಕೊಂಡು ಸುಟ್ಟ ಗಾಯಗಳೊಂದಿಗೆ ಅಸ್ವಸ್ಥಗೊಂಡಿದ್ದ ಮಹಿಳೆ ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ನೇಜಾರಿನಲ್ಲಿ ನಡೆದಿದೆ.

ನೇಜಾರಿನ ಪ್ರೇಮಾ ಆರ್ ಕಾಮತ್ (89) ಮೃತಪಟ್ಟವರು.

ಅ.24 ರಂದು ದೀಪಾವಳಿ ಹಬ್ಬದ ಪ್ರಯುಕ್ತ ಮನೆಯ ಅಂಗಳದಲ್ಲಿ ಬೆಳಗಿದ್ದ ಹಣತೆಯ ಬೆಂಕಿ ಆಕಸ್ಮಿಕವಾಗಿ ಪ್ರೇಮಾ ಆರ್ ಕಾಮತ್ ರವರ ಸೀರೆಗೆ ತಾಗಿ ಹೊತ್ತಿಕೊಂಡಿದ್ದ ಪರಿಣಾಮ ಅವರು ಗಂಭೀರ ಸ್ವರೂಪದ ಸುಟ್ಟ ಗಾಯಗೊಂಡು ತೀವ್ರ ಅಸ್ವಸ್ಥಗೊಂಡಿದ್ದರು. ತಕ್ಷಣ ಅವರನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ 11 ದಿನಗಳ ಕಾಲ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚೇತರಿಸಿಕೊಳ್ಳದೆ ಇದ್ದೂದರಿಂದ ಅವರನ್ನು ಡಿಶ್ಚಾರ್ಜ್ ಮಾಡಿ ಕಲ್ಯಾಣಪುರದ ಗೊರಟ್ಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ನ.11 ರಂದು ಬೆಳಿಗ್ಗೆ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಮೃತರ ಮಗಳು ಮುಕ್ತ ಕಾಮತ್ ಅವರು ನೀಡಿದ ಮಾಹಿತಿಯಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.

error: Content is protected !!