ಹಂಪಿಯ ಸೊಬಗು ಸವಿಯಬೇಕೆನ್ನುವವರಿಗೆ ಶುಭ ಸುದ್ಧಿ

ಬಳ್ಳಾರಿ : ಜಿಲ್ಲೆಯ ಪ್ರಸಿದ್ಧ ಕ್ಷೇತ್ರಗಳಲ್ಲಿ ಒಂದಾದಂತ ಹಂಪಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಒಂದು ಶುಭಸುದ್ಧಿ . ಈಗಾಗಲೆ ಹಂಪಿಗೆ ಭೇಟಿ ನೀಡುತ್ತಿರುವ ಪ್ರವಾಸಿಗರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಈ ನಿಟ್ಟಿನಲ್ಲಿ ಪ್ರವಾಸಿಗರಿಗೆ ಅನುಕೂಲವಾಗುವಂತೆ ಆನ್ ಲೈನ್ ಜೊತೆಗೆ, ಸ್ಥಗಿತಗೊಳಿಸಿದ್ದಂತ ಆಫ್ ಲೈನ್ ಟಿಕೆಟ್ ಖರೀದಿ ವ್ಯವಸ್ಥೆಯನ್ನೂ ಆರಂಭಿಸಲು ನಿರ್ಧರಿಸಲಾಗಿದೆ. 

ಈ ಕುರಿತಂತೆ ಮಾಹಿತಿ ನೀಡಿದಂತ ಹಂಪಿ ವೃತ್ತದ ಡೆಪ್ಯುಟಿ ಸೂಪರಿಟೆಂಡಂಟ್ ಆಫ್ ಪೊಲೀಸ್ ಪಿ.ಕಾಳಿಮುತ್ತು ಅವರು, ಕೊರೋನಾ ಸೋಂಕು ಹರಡುವ ಭೀತಿಯಿಂದಾಗಿ ಆಫ್ ಲೈನ್ ನಲ್ಲಿ ಹಂಪಿಯ ಭೇಟಿ ಟಿಕೆಟ್ ಖರೀದಿಯನ್ನು ಸ್ಥಗಿತಗೊಳಿಸಿ, ಆನ್ ಲೈನ್ ಮೂಲಕ ಮಾತ್ರವೇ ಟಿಕೆಟ್ ಖರೀದಿಗೆ ಅವಕಾಶ ನೀಡಲಾಗಿತ್ತು. ಆದರೆ, ಕೆಲ ಪ್ರವಾಸಿಗರು ಆನ್ ಲೈನ್ ನಲ್ಲಿ ನೆಟ್ವರ್ಕ್ ಸಮಸ್ಯೆಯಿಂದ ಟಿಕೆಟ್ ಖರೀದಿಸಲು ಆಗದೇ ಹಿಂದಿರುಗುತ್ತಿದ್ದಾರೆ.

ಹೀಗಾಗಿ ಮತ್ತೆ ಹಂಪಿ ಪ್ರವಾಸಿಗರಿಗೆ ಆಫ್ ಲೈನ್ ನಲ್ಲೂ ಟಿಕೆಟ್ ಖರೀದಿಗೆ ಅವಕಾಶ ನೀಡಲು ನಿರ್ಧರಿಸಲಾಗುತ್ತಿದೆ ಎಂದರು. ಹಂಪಿಗೆ ಭೇಟಿ ನೀಡಲು ಇಚ್ಚಿಸುವ ಪ್ರವಾಸಿಗರು ತಾಲೂಕಿನ ಕಮಲಾಪುರದ ಪುರಾತತ್ವ ಇಲಾಖೆಯ ವಸ್ತು ಸಂಗ್ರಹಾಲಯ, ವಿಜಯ ವಿಠಲ ದೇವಸ್ಥಾನ ಹಾಗೂ ಕಮಲ ಮಹಲ್ ಸ್ಮಾರಕ ಕೌಂಟರ್‌ನಲ್ಲಿ ಆಫ್ ಲೈನ್ ನಲ್ಲಿ ಈಗ ಟಿಕೆಟ್ ಖರೀದಸಬಹುದಾಗಿ ಎಂದು ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *

error: Content is protected !!