ಕಾಂತಾರ ಚಿತ್ರದ ಕಲಾವಿದರು ಗಳಿಸಿದ ಮೊತ್ತವೆಷ್ಟು ಗೊತ್ತಾ….?

ಬೆಂಗಳೂರು ನ.7 : ನಟ ನಿರ್ದೇಶಕ ರಿಷಬ್ ಶೆಟ್ಟಿ ಅವರ ಕನ್ನಡದ ಕಾಂತಾರ ಚಲನಚಿತ್ರ ರಾಜ್ಯಕ್ಕೆ ಸೀಮಿತವಾಗಿರದೆ ಇದೀಗ ದೇಶ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿದೆ ಇದೀಗ ಚಿತ್ರದ ಯಶಸ್ಸಿನ ಬೆನ್ನಲ್ಲೇ ಚಿತ್ರ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲಂಸ್ ಚಿತ್ರದ ಕಲಾವಿದರಿಗೆ ಉತ್ತಮ ಸಂಭಾವನೆಯನ್ನು ನೀಡಿದೆ.

ಕಾಂತಾರ ಚಿತ್ರ ಈಗಾಗಲೇ ಬಾಕ್ಸ್ ಆಫೀಸ್ ನಲ್ಲಿ ಸೂಪರ್ ಹಿಟ್ ಆಗಿ 300 ಕೋಟಿ ಗಳಿಕೆ ಸಾದಿಸಿದ್ದು, ಹಲವು ಚಿತ್ರಗಳ ದಾಖಲೆಗಳನ್ನು ಹೊಡೆದುರುಳಿಸಿದೆ. ಇದೀಗ ಚಿತ್ರದ ಯಶಸ್ಸಿನ ನಡುವೆ ನಾಯಕ ನಟರಾದ ರಿಷಬ್ ಶೆಟ್ಟಿ, ನಟಿ ಸಪ್ತಮಿ ಗೌಡ, ಕಿಶೋರ್, ಅಚ್ಚುತ್ ಕುಮಾರ್, ನವೀನ್ ಡಿ ಪಡೀಲ್, ಪ್ರಮೋದ್ ಶೆಟ್ಟಿ ಸೇರಿದಂತೆ ಪ್ರಮುಖ ಕಲಾವಿದರಿಗೆ ಹೊಂಬಾಳೆ ಫಿಲಂಸ್ ಉತ್ತಮ ಸಂಭಾವನೆ ನೀಡಿ ಅಭಿನಂದನೆ ಸಲ್ಲಿಸಿದೆ

ಚಿತ್ರದ ಯಶಸ್ಸಿನ ಬಹುಪಾಲು ಶ್ರೇಯಸ್ಸು ರಿಷಬ್ ಶೆಟ್ಟಿ ಅವರ ನಟನೆಗೆ ಸಲ್ಲುತ್ತದೆ ಅನ್ನೋದರಲ್ಲಿ ಎರಡು ಮಾತಿಲ್ಲ. ಇದೀಗ ಚಿತ್ರದ ಯಶಸ್ಸಿನ ಹಿನ್ನೆಲೆಯಲ್ಲಿ ನಟ ರಿಷಬ್ ಶೆಟ್ಟಿ ಅವರಿಗೆ ಹೊಂಬಾಳೆ ಫಿಲಂ 4 ಕೋಟಿ ಸಂಭಾವನೆ ನೀಡಿದೆ ಎಂಬ ಮಾಹಿತಿ ಸಿನಿ ಅಂಗಳದಲ್ಲಿ ಹರಿದಾಡುತ್ತಿದೆ. ಇವರ ಜೊತೆಗೆ ಚಿತ್ರದ ನಟಿ ಸಪ್ತಮಿ ಗೌಡ ಅವರಿಗೆ 1.25 ಕೋಟಿ ರೂ., ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ ಕಿಶೋರ್ ಅವರಿಗೆ ಒಂದು ಕೋಟಿ, ಅಚ್ಚುತ್ ಕುಮಾರ್ ಅವರಿಗೆ 70 ಲಕ್ಷ, ಪ್ರಮೋದ್ ಶೆಟ್ಟಿ ಅವರಿಗೆ 60 ಲಕ್ಷ ಹಾಗೂ ನವೀನ್ ಡಿ ಪಡೀಲ್ ಅವರಿಗೆ 40 ಲಕ್ಷ ಸಂಭಾವನೆ ನೀಡಲಾಗಿದೆ ಎಂದು ತಿಳಿದುಬಂದಿದೆ.

ಕರಾವಳಿ ಸೊಗಡನ್ನು ಹೊಂದಿರುವ ಕಾಂತಾರ ಚಿತ್ರವು ಕನ್ನಡದಲ್ಲಿ ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿದ್ದಂತೆ ದಕ್ಷಿಣ ಭಾರತದ ಇತರ ಭಾಷೆಗಳ ಜೊತೆಗೆ ಹಿಂದಿಗೂ ಡಬ್ ಆಗಿ ರಿಲೀಸ್ ಆಗಿತ್ತು. ಈ ಚಿತ್ರವನ್ನು ರಿಲೀಸ್ ಆದ ಎಲ್ಲಾ ಭಾಷೆಯ ಪ್ರೇಕ್ಷಕರು ಮೆಚ್ಚಿಕೊಂಡಿದ್ದು, ಚಿತ್ರದ ಯಶಸ್ಸು ಹಾಗೂ ಗಳಿಕೆ ಹೆಚ್ಚಾಗುತ್ತಾ ಹೋಯಿತು. ಇದೀಗ ಕಾಂತಾರ ಚಿತ್ರವು ರಾಷ್ಟ್ರ ಮಾತ್ರವಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲೂ ಜನಪ್ರಿಯತೆಗೆ ಪಾತ್ರವಾಗಿದೆ.

Leave a Reply

Your email address will not be published.

error: Content is protected !!