ಪ್ರೈವೆಟ್ ಜೆಟ್ ಏರಿದ ಕಾಂತಾರ

ಬೆಂಗಳೂರು ಅ.31 : ಕನ್ನಡದ ಕಾಂತಾರ ಚಿತ್ರದ ಯಶಸ್ಸು ನಟ-ನಿರ್ದೇಶಕ ರಿಷಬ್ ಶೆಟ್ಟಿ ಅವರಿಗೆ ಹೊಸ ಇಮೇಜನ್ನು ತಂದು ಕೊಟ್ಟಿದ್ದೆ.

ಇದೀಗ ಚಿತ್ರದ ಯಶಸ್ಸಿನ ಬಳಿಕ ಭಾರೀ ಬ್ಯುಸಿಯಾಗಿರುವ ರಿಷಬ್ ಶೆಟ್ಟಿ ಅವರು ಇತ್ತೀಚೆಗೆ ಪ್ರೈವೆಟ್ ಜೆಟ್ ನಲ್ಲಿ ಕಾಣಿಸಿಕೊಂಡಿದ್ದು ಎಲ್ಲೆಡೆ ಸುದ್ದಿಯಾಗಿದ್ದಾರೆ.

ಚಿತ್ರದ ಪ್ರಮೋಷನ್ ನಲ್ಲಿ ತೊಡಗಿಕೊಂಡಿರುವ ರಿಷಬ್ ಶೆಟ್ಟಿ ಅವರು ಚೆನ್ನೈ, ವಿಶಾಖಪಟ್ಟಣಂ, ತಿರುಪತಿ, ಮುಂಬೈ ಸೇರಿದಂತೆ ಅನೇಕ ಸ್ಥಳಗಳಿಗೆ ಭೇಟಿ ನೀಡಿದ್ದು, ಇಲ್ಲೆಲ್ಲ ರಿಷಭ್ ಅವರು ಪ್ರೈವೆಟ್ ಜೆಟ್‍ನಲ್ಲಿಯೇ ತೆರಳಿದ್ದಾರೆ ಎಂದು ಮಾಧ್ಯಮ ವರದಿಯಿಂದ ತಿಳಿದು ಬಂದಿದೆ.

ಇದೀಗ ರಿಷಬ್ ಶೆಟ್ಟಿ ಅವರು, ಪ್ರೈವೆಟ್ ಜೆಟ್ ಹತ್ತಿರುವ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಶೆಟ್ರ ಗೋಲ್ಡನ್ ಟೈಮ್ ಆರಂಭವಾಗಿದೆ ಎಂದು ಅಭಿಮಾನಿಗಳು ಕಮೆಂಟ್ ಮಾಡಿ ಶುಭ ಹಾರೈಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!