ಗುರುಪುರ : ಸೇತುವೆಯ ಮೇಲೆ ದ್ವಿಚಕ್ರ ವಾಹನ ನಿಲ್ಲಿಸಿ ನದಿಗೆ ಹಾರಿದ ವ್ಯಕ್ತಿ
ಕುಪ್ಪೆ ಪದವು ಅ.28 : ಗುರುಪುರ ಸೇತುವೆಯ ಮೇಲೆ ತನ್ನ ದ್ವಿಚಕ್ರ ವಾಹನ ನಿಲ್ಲಿಸಿ ವ್ಯಕ್ತಿಯೊರ್ವರು ನದಿಗೆ ಹಾರಿರುವ ಘಟನೆ ನಡೆದಿದೆ.
ವಾಮಂಜೂರು ಮೂಡುಶೆಡ್ಡೆ ನಿವಾಸಿ ಅರುಣ್ ಪೂಜಾರಿ(38) ನದಿಗೆ ಹಾರಿರುವ ವ್ಯಕ್ತಿ.
ಪೈಂಟರ್ ಆಗಿರುವ ಅರುಣ್ ವಿಚ್ಛೆಧೀತರಾಗಿದ್ದು, ಓರ್ವ ಮಗಳನ್ನು ಹೊಂದಿದ್ದಾರೆ. ಅವರು ನಿನ್ನೆ ರಾತ್ರಿ 8:30 ರ ಸುಮಾರಿಗೆ ಗುರುಪುರ ಸೇತುವೆಯ ಮೇಲೆ ತನ್ನ ದ್ವಿಚಕ್ರ ವಾಹನ ನಿಲ್ಲಿಸಿ ನದಿಗೆ ಹಾರಿದ್ದರು. ಅರುಣ್ ನದಿಗೆ ಹಾರುವುದನ್ನು ಕಂಡ ಸ್ಥಳೀಯರು ತಕ್ಷಣ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಧಾವಿಸಿದ ಬಜಪೆ ಪೊಲೀಸರು ಅರುಣ್ ಅವರ ಪತ್ತೆಗಾಗಿ ಹುಡುಕಾಟ ನಡೆಸಿದ್ದರಾದರೂ ಅವರು ಪತ್ತೆಯಾಗಿರಲಿಲ್ಲ. ಬಳಿಕ ರಾತ್ರಿಯಾದುದರಿಂದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಇಂದು ಬೆಳಿಗ್ಗೆ ಮತ್ತೆ ಹುಡುಕಾಟ ಕಾರ್ಯಾಚರಣೆ ಮುಂದುವರಿದಿದೆ ಎಂದು ತಿಳಿದು ಬಂದಿದೆ.