ಅಭಿವೃದ್ಧಿಗಾಗಿ ಸುಧಾರಣೆ ಕ್ರಮಗಳು ಅಗತ್ಯ: ಪ್ರಧಾನಿ ಮೋದಿ

ಲಖನೌ: ದೇಶದ ಬಹು ನಿರೀಕ್ಷಿತ ಆಗ್ರಾ ಮೆಟ್ರೋ ಯೋಜನೆಗೆ ವಿಡಿಯೊ ಕಾನ್ಫೆರೆನ್ಸ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು. 8379.62 ಕೋಟಿ ವೆಚ್ಚದ ಆಗ್ರಾ ಮೆಟ್ರೊ ಯೋಜನೆಯು ಎರಡು ಕಾರಿಡಾರ್‌ಗಳನ್ನು ಒಳಗೊಂಡಿದ್ದು, ಒಟ್ಟು 29.4 ಕಿಲೋ ಮೀಟರ್ ಉದ್ದ ರೈಲು ಮಾರ್ಗವಾಗಿದೆ.

ಈ ಯೋಜನೆಗೆ ಹಸಿರು ನಿಶಾನೆ ತೋರಿದ ಬಳಿಕ ಪ್ರಧಾನಿ ನರೇಂದ್ರ ಮೋದಿಯವರು ಮಾತನಾಡಿ, ಅಭಿವೃದ್ಧಿಗಾಗಿ ಸುಧಾರಣೆ ಕ್ರಮಗಳು ಅಗತ್ಯವಾಗಿದ್ದು, ಎಲ್ಲ ಕ್ಷೇತ್ರಗಳ ಸಮಗ್ರ ಸುಧಾರಣೆಗೆ ಸರ್ಕಾರ ಬದ್ಧವಾಗಿದೆ. ಹೂಡಿಕೆಯನ್ನು ಹೆಚ್ಚಿಸಬೇಕು ಮತ್ತು ಆಧುನಿಕ ತಂತ್ರಜ್ಞಾನದ ಗರಿಷ್ಠ ಪ್ರಯೋಜನವನ್ನು ಪಡೆದುಕೊಳ್ಳಬೇಕು. ಕೆಲವು ಕಾನೂನುಗಳು ಹಿಂದಿನ ಶತಮಾನದಲ್ಲಿ ಉತ್ತಮವಾಗಿದ್ದವು. ಆದರೆ, ಈಗ ಅಂತಹ ಕಾನೂನುಗಳು ಅಪ್ರಸ್ತುತವಾಗಿವೆ. ಜನರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಜನರ ಬದುಕು ಸರಳ ಮತ್ತು ಸುಂದರವಾಗಿರಬೇಕು ಎನ್ನುವುದು ಸರ್ಕಾರದ ಉದ್ದೇಶವಾಗಿದೆ’ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!