ಜಿಹಾದ್ ಪರಿಕಲ್ಪನೆ ಭಗವದ್ಗೀತೆ, ಕ್ರಿಶ್ಚಿಯನ್ ನಲ್ಲಿಯೂ ಇದೆ- ಶಿವರಾಜ್ ಪಾಟೀಲ್

ನವದೆಹಲಿ ಅ.21 : ಜಿಹಾದ್ ಪರಿಕಲ್ಪನೆ ಇಸ್ಲಾಂನಲ್ಲಿ ಮಾತ್ರವಲ್ಲದೆ, ಭಗವದ್ಗೀತೆ ಮತ್ತು ಕ್ರಿಶ್ಚಿಯನ್ ಧರ್ಮದಲ್ಲಿಯೂ ಇದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಶಿವರಾಜ್ ಪಾಟೀಲ್ ಅವರು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.

ಕಾಂಗ್ರೆಸ್‍ನ ಹಿರಿಯ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಮೊಹ್ಸಿನಾ ಕಿದ್ವಾಯಿ ಅವರ ಜೀವನಚರಿತ್ರೆ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಇಸ್ಲಾಂ ಧರ್ಮದಲ್ಲಿ ಜಿಹಾದ್ ಬಗ್ಗೆ ಸಾಕಷ್ಟು ಚರ್ಚೆಗಳಿವೆ ಎಂದು ಹೇಳಲಾಗುತ್ತದೆ. ಸರಿಯಾದ ಉದ್ದೇಶಗಳನ್ನು ಹೊಂದಿದ್ದರೂ ಮತ್ತು ಸರಿಯಾದ ಕೆಲಸವನ್ನು ಮಾಡುತ್ತಿದ್ದರೂ ಯಾರೂ ಅರ್ಥಮಾಡಿಕೊಳ್ಳುವುದಿಲ್ಲ. `ಇದು ಕುರಾನ್‍ನಲ್ಲಿ ಮಾತ್ರವಲ್ಲ, ಭಗವದ್ಗೀತೆಯ ಭಾಗವಾದ ಮಹಾಭಾರತದಲ್ಲಿಯೂ ಸಹ ಇದೆ. ಶ್ರೀ ಕೃಷ್ಣನು ಅರ್ಜುನನಿಗೆ ಜಿಹಾದ್ ಬಗ್ಗೆ ಹೇಳುತ್ತಾನೆ. ಈ ವಿಷಯವು ಕುರಾನ್ ಅಥವಾ ಗೀತೆಯಲ್ಲಿ ಮಾತ್ರವಲ್ಲದೆ ಕ್ರಿಶ್ಚಿಯನ್ ಧರ್ಮದಲ್ಲಿಯೂ ಇದೆ’ ಎಂದು ಹೇಳಿದರು.

ಜಗತ್ತಿನಲ್ಲಿ ಶಾಂತಿ ನೆಲೆಸುವ ಅವಶ್ಯಕತೆ ಇದೆ ಎಂದು ಪ್ರತಿಪಾದಿಸಿದ ಅವರು, ಮೊಹ್ಸಿನಾ ಕಿದ್ವಾಯಿ ಅವರ ಪುಸ್ತಕವು ನಿಮ್ಮ ಧರ್ಮವನ್ನು ಅನುಸರಿಸುವಾಗ ಎಲ್ಲಾ ಧರ್ಮಗಳನ್ನು ಗೌರವಿಸುವ ಬಗ್ಗೆಯೂ ಹೇಳುತ್ತದೆ ಎಂದು ತಿಳಿಸಿದರು.

ಇದೀಗ ಪಾಟೀಲ್ ಅವರ ಈ ವಿವಾದಾತ್ಮಕ ಹೇಳಿಕೆ ಕುರಿತಂತೆ ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದ್ದು, ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದೆ.

ಅಲ್ಲದೆ ಪಾಟೀಲ್ ಹೇಳಿಕೆಗೆ ಟ್ವೀಟ್ ಮೂಲಕ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲಾ ಅವರು, ಎಎಪಿಯ ಗೋಪಾಲ್ ಇಟಾಲಿಯಾ ಮತ್ತು ರಾಜೇಂದ್ರ ಪಾಲ್ ನಂತರ ಕಾಂಗ್ರೆಸ್ ನ ಶಿವರಾಜ್ ಪಾಟೀಲ್ ಶ್ರೀಕೃಷ್ಣ ಅರ್ಜುನನಿಗೆ ಜಿಹಾದ್ ಪ್ರವಚನ ನೀಡಿದರು ಎಂದು ಹೇಳುವ ಮೂಲಕ ಹಿಂದೂ ದ್ವೇಷ ಮತ್ತು ಮತಬ್ಯಾಂಕ್ ರಾಜಕಾರಣ ಮಾಡಿದ್ದಾರೆ' ಎಂದು ಬರೆದುಕೊಂಡಿದ್ದಾರೆ. ಹಾಗೂಕಾಂಗ್ರೆಸ್ ಹಿಂದೂ/ಕೇಸರಿ ಭಯೋತ್ಪಾದನೆ ಇದೆ ಎಂದು ಹೇಳಿತು. ರಾಮಮಂದಿರವನ್ನು ವಿರೋಧಿಸಿತು, ರಾಮನ ಅಸ್ತಿತ್ವವನ್ನೂ ಪ್ರಶ್ನಿಸಿತ್ತು. ಹಿಂದುತ್ವ=ಐಎಸ್‍ಐಎಸ್ ಎಂದೂ ಹೇಳಿತ್ತು’ ಎಂದು ಅವರು ಟೀಕಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!