ಕಾಂತಾರದಿಂದ ಕೋಟಿ ಬಜೆಟ್ ಸಿನೆಮಾಗಳಿಗೆ ಹಾರ್ಟ್ ಅಟ್ಯಾಕ್- ನಿರ್ದೇಶಕ ಆರ್.ಜಿ.ವಿ

ಬೆಂಗಳೂರು ಅ.20 : ನಟ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ `ಕಾಂತಾರ’ ಚಿತ್ರದಿಂದ ಕೋಟಿ ಬಜೆಟ್ ಚಿತ್ರಗಳಿಗೆ ಹಾರ್ಟ್ ಅಟ್ಯಾಕ್ ಆಗಿದೆ ಎಂದು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಹೇಳಿದ್ದಾರೆ.

ಕಾಂತಾರ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಅವರು ಟ್ವೀಟ್ ಮಾಡಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, `ದೊಡ್ಡ ಬಜೆಟ್‍ನ ಸಿನಿಮಾಗಳು ಬಂದರೆ ಮಾತ್ರ ಜನರು ಥಿಯೇಟರ್ ಗೆ ಬರುತ್ತಾರೆ ಎಂಬ ಕಟ್ಟುಕತೆಯನ್ನು ರಿಷಬ್ ಶೆಟ್ಟಿ ಸುಳ್ಳು ಮಾಡಿದ್ದಾರೆ. ಮುಂದಿನ ಹಲವು ದಶಕಗಳಿಗೆ ಕಾಂತಾರ ಚಿತ್ರ ಒಂದೊಳ್ಳೆ ಪಾಠ’ ಎಂದು ಬರೆದುಕೊಂಡಿದ್ದಾರೆ.

ಹಾಗೂ `300, 400, 500 ಕೋಟಿ ಬಜೆಟ್ ಸಿನಿಮಾಗಳು ಕಾಂತಾರ' ಕಲೆಕ್ಷನ್ ಎಂಬ ಹಾರ್ಟ್ ಅಟ್ಯಾಕ್‍ನಿಂದ ಮೃತಪಟ್ಟಿವೆ.ಡೆವಿಲ್’ ರಿಷಬ್ ಶೆಟ್ಟಿಗೆ ಧನ್ಯವಾದ ಹೇಳಬೇಕು. ದೊಡ್ಡ ಬಜೆಟ್ ಸಿನಿಮಾಗಳು ಕಾಂತಾರದ ಭರ್ಜರಿ ಕಲೆಕ್ಷನ್ ನಿಂದ ರಾತ್ರೋರಾತ್ರಿ ಕಾಲ್ಕಿತ್ತಿವೆ. ಕಾಂತಾರ ಎಂಬ ಒಂದೊಳ್ಳೆಯ ಪಾಠವನ್ನು ಹೇಳಿದ ನಿಮಗೆ ಧನ್ಯವಾದ. ಚಿತ್ರರಂಗದ ಎಲ್ಲರೂ ನಿಮಗೆ ಟ್ಯೂಷನ್ ಹಣವನ್ನು ಪಾವತಿಸಬೇಕು’ ಎಂದು ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!