ಭೂತಕೋಲ ಹಿಂದೂಗಳದ್ದಲ್ಲ : ನಟ ಚೇತನ್ ಮತ್ತೆ ಸಮರ್ಥನೆ

ಬೆಂಗಳೂರು ಅ.19 : ಭೂತಕೋಲ ಹಿಂದೂಗಳದ್ದಲ್ಲ ಎಂಬ ನಟ ಚೇತನ್ ಹೇಳಿಕೆಯನ್ನು ಅವರು ಮತ್ತೆ ಸಮರ್ಥಿಸಿಕೊಂಡಿದ್ದಾರೆ.

ಭೂತಕೋಲ ಆಚರಣೆ ಹಿಂದೂ ಸಂಸ್ಕೃತಿಯ ಭಾಗವೇ ಆಗಿದೆ ಎಂಬ ನಟ ರಿಷಬ್ ಶೆಟ್ಟಿ ಅವರ ಹೇಳಿಕೆಯನ್ನು ಅಲ್ಲಗಳೆದಿರುವ ನಟ ಚೇತನ್ ಸುದ್ದಿಗೋಷ್ಠಿ ಕರೆದು ಮಾತನಾಡಿ, ಹಿಂದಿ ಹೇರಿಕೆ ಹೇಗೆ ಒಪ್ಪೋಕೆ ಆಗೋದಿಲ್ಲೋ ಅದೇ ರೀತಿ ಹಿಂದುತ್ವ ಹೇರಿಕೆಯನ್ನು ಒಪ್ಪೋಕೆ ಆಗೋದಿಲ್ಲ. ಧರ್ಮ ಹಾಗೂ ಜಾತಿಗಳಲ್ಲಿ ವಿವಿಧತೆ ಇದೆ. ಹಿಂದೂ ಬೇರೆ, ಹಿಂದುತ್ವವೇ ಬೇರೆ. ಭೂತಕೋಲ ಮೂಲ ನಿವಾಸಿಗಳ ಆಚರಣೆ. ಕೇವಲ ಹಿಂದು ಧರ್ಮದ್ದಲ್ಲ. ಎಲ್ಲಾ ಆಚರಣೆಗಳನ್ನು ಗೌರವಿಸಿ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!