ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯಲ್ಲಿ ಅಕ್ರಮ ನಡೆದಿದೆ: ಶಶಿ ತರೂರ್ ಆರೋಪ

ಹೊಸದಿಲ್ಲಿ ಅ.19 : ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಚುನಾವಣೆ `ಮುಕ್ತ, ನ್ಯಾಯೋಚಿತ’ವಾಗಿಲ್ಲ, ಅಕ್ರಮ ನಡೆದಿದೆ ಎಂದು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಶಶಿ ತರೂರ್ ಗಂಭೀರ ಆರೋಪ ಮಾಡಿದ್ದಾರೆ.

ಅ.17 ರಂದು ನಡೆದ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಚುನಾವಣೆಯ ಮತ ಎಣಿಕೆ ಇಂದು ಬೆಳಿಗ್ಗೆ ಆರಂಭಗೊಂಡಿತ್ತು. ಈ ನಡುವೆ ಮತ ಎಣಿಕೆ ಆರಂಭವಾದ ಕೂಡಲೇ ತರೂರ್ ಅವರ ತಂಡವು ಹಲವಾರು “ಸಮಸ್ಯೆಗಳಿವೆ” ಎಂದು ಆರೋಪಿಸಿದೆ. ಹಾಗೂ “ನಾವು ಮಧುಸುದನ್ ಮಿಸ್ತ್ರಿ ಕಚೇರಿಯೊಂದಿಗೆ ನಿರಂತರ ಸಂವಹನದಲ್ಲಿದ್ದೇವೆ. ಅನೇಕ ವಿಭಿನ್ನ ವಿಷಯಗಳ ಬಗ್ಗೆ ಅವರಿಗೆ ಮಾಹಿತಿ ನೀಡಿದ್ದೇವೆ. ಆ ಕುರಿತು ನಮಗೆ ಇನ್ನೂ ಸರಿಯಾದ ಉತ್ತರ ಪಡೆಯಲು ಸಾಧ್ಯವಿಲ್ಲ” ಎಂದು ತರೂರ್ ಅವರ ಚುನಾವಣಾ ಏಜೆಂಟ್ ಸಲ್ಮಾನ್ ಸೊಝ್ ಹೇಳಿದರು ಎಂಬುದಾಗಿ ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!