ಭಾತದಲ್ಲಿ ಓಮಿಕ್ರಾನ್ ರೂಪಾಂತರಿ ಬಿಎಫ್.7 ಆತಂಕ : ತಜ್ಞರಿಂದ ಮುನ್ನೆಚ್ಚರಿಕಾ ಸಲಹೆ

ದೆಹಲಿ ಅ.19 : ಚೀನಾದಲ್ಲಿ ಮೊದಲು ಪತ್ತೆಯಾದ ಓಮಿಕ್ರಾನ್ ರೂಪಾಂತರಿ ಬಿಎಫ್.7 ಸೋಂಕು ಈಗ ಯುನೈಟೆಡ್ ಸ್ಟೇಟ್ಸ್, ಯುಕೆ, ಆಸ್ಟ್ರೇಲಿಯಾ ಮತ್ತು ಬೆಲ್ಜಿಯಂನಲ್ಲಿ ಹರಡಿದೆ. ಇದೀಗ ಭಾತದಲ್ಲಿ ಓಮಿಕ್ರಾನ್ ರೂಪಾಂತರಿ ಬಿಎಫ್.7 ಸೋಂಕು ಹರಡುವ ಆತಂಕ ಉಂಟಾಗಿದ್ದು, ಮುನ್ನೆಚ್ಚರಿಕೆಗಳನ್ನು ವಹಿಸುವಂತೆ ತಜ್ಞರು ಸಲಹೆ ನೀಡಿದ್ದಾರೆ.

ಭಾರತದಲ್ಲಿ ಓಮಿಕ್ರಾನ್ ಉಪ ತಳಿಯ ಮೊದಲ ಪ್ರಕರಣವನ್ನು ಗುಜರಾತ್‍ನಲ್ಲಿ ಪತ್ತೆಹಚ್ಚಲಾಗಿದೆ. ಗುಜರಾತ್ ಬಯೋಟೆಕ್ನಾಲಜಿ ರಿಸರ್ಚ್ ಸೆಂಟರ್ ಇದನ್ನು ದೃಢೀಕರಿಸಿದ್ದು, ಇದನ್ನು’ಓಮಿಕ್ರಾನ್ ಸ್ಪಾನ್’ ಎಂದು ವಿವರಿಸಲಾಗಿದೆ. ಓಮಿಕ್ರಾನ್ ಉಪ ತಳಿಯಾದ ಬಿಎ5.1.7 ಮತ್ತು ಬಿಎಫ್.7 ಚೀನಾದ ಮಂಗೋಲಿಯಾದ ಪ್ರದೇಶದಿಂದ ಹೊರಹೊಮ್ಮಿದ ನಂತರ ಈಗ ಇತರ ಭಾಗಗಳಿಗೆ ವ್ಯಾಪಿಸಿ ಆತಂಕ ಸೃಷ್ಟಿಸುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಐದು ದಿನಗಳ ದೀಪಾವಳಿ ಹಬ್ಬವು ಬಹಳಷ್ಟು ಪಾರ್ಟಿಗಳು ಮತ್ತು ಗೆಟ್-ಟುಗೆದರ್‍ಗಳನ್ನು ಒಳಗೊಂಡಿರುವುದರಿಂದ ಹೆಚ್ಚಿನ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕೆಂದು ಆರೋಗ್ಯ ತಜ್ಞರು ಸೂಚಿಸಿದ್ದಾರೆ.

ಹಾಗೂ ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸುವುದು ಕೊರೊನಾ ವೈರಸ್ ವಿರುದ್ಧ ಪ್ರಾಥಮಿಕ ರಕ್ಷಣೆಯಾಗಿ ಉಳಿದಿದೆ. ಎರಡು ಅಧ್ಯಯನಗಳ ಪ್ರಕಾರ, ಬಿಎಫ್.7 ಇತರ ಅನೇಕ ಓಮಿಕ್ರಾನ್ ಉಪ ತಳಿಗಿಂತಲೂ ಮುಂಚಿನ ಕಾಯಿಲೆಗಳು ಅಥವಾ ವ್ಯಾಕ್ಸಿನೇಷನ್ ಗಳ ಪ್ರತಿಕಾಯಗಳಿಂದ ಪಾರಾಗಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ. ಅದಾಗ್ಯೂ ಹೊಸ ರೂಪಾಂತರದ ಪ್ರಸರಣ ದರದ ಬಗ್ಗೆ ತಜ್ಞರು ಕಳವಳ ವ್ಯಕ್ತಪಡಿಸಿದ್ದು, ಇದು ಲಸಿಕೆ ಪ್ರತಿರಕ್ಷೆಯನ್ನು ಮೀರಿ ಹೋಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಅಧಿಕೃತ ಅಂಕಿಅಂಶಗಳ ಪ್ರಕಾರ ದೆಹಲಿಯಲ್ಲಿ ಕೋವಿಡ್ -19 ಪ್ರಕರಣಗಳಲ್ಲಿ ಏರಿಕೆ ಕಂಡುಬಂದಿದ್ದು ಪರೀಕ್ಷಾ ಸಕಾರಾತ್ಮಕತೆಯ ದರವು ಶೇಕಡಾ 2 ಕ್ಕಿಂತ ಹೆಚ್ಚಿದೆ. ಕಳೆದ ಎರಡು ದಿನಗಳಲ್ಲಿ ಯಾವುದೇ ಸಾವು ವರದಿಯಾಗದಿದ್ದರೂ, ದೆಹಲಿಯಲ್ಲಿ 135 ಹೊಸ ಕೋವಿಡ್ -19 ಪ್ರಕರಣಗಳು ಕಂಡುಬಂದಿವೆ. ನಗರದಲ್ಲಿ ಕಳೆದ ವಾರ 112 ಪ್ರಕರಣಗಳು ದಾಖಲಾಗಿವೆ. ಶೇಕಡಾ 1.84 ರ ಸಕಾರಾತ್ಮಕ ದರದೊಂದಿಗೆ ಶನಿವಾರ ಪ್ರಕರಣಗಳ ಸಂಖ್ಯೆ 130 ಆಗಿತ್ತು ಎಂದು ತಿಳಿದು ಬಂದಿದೆ.

ಎಲ್ಲಾ ಇತರ ರೂಪಾಂತರಗಳಂತೆ ಓಮಿಕ್ರಾನ್ ಬಿಎಫ್.7 ನ ರೋಗಲಕ್ಷಣಗಳು ಒಂದೇ ಆಗಿರುತ್ತವೆ, ಆದರೆ ದೇಹದ ನೋವುಗಳು ಹೆಚ್ಚು ನೋವುಂಟುಮಾಡುತ್ತವೆ ಎಂದು ತಜ್ಞರು ಹೇಳಿದ್ದಾರೆ. ಉಸಿರು ಕಟ್ಟುವಿಕೆ ಗಂಟಲು ಕೆರತ ಆಯಾಸ ಕೆಮ್ಮು ಮತ್ತು ಶೀತ ನೆಗಡಿ ಜ್ವರ ಇವುಗಳು ಈ ಸೋಂಕಿನ ಸಾಮಾನ್ಯ ಲಕ್ಷಣಗಳಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

Leave a Reply

Your email address will not be published. Required fields are marked *

error: Content is protected !!