ಉಡುಪಿ: ಪಿಎಫ್‍ಐ ಮತ್ತು ಎಸ್‍ಡಿಪಿಐ ಕಚೇರಿಗಳ ಮೇಲೆ ರಾತ್ರೋರಾತ್ರಿ ದಾಳಿ,ದಾಖಲೆ ವಶಕ್ಕೆ
ಉಡುಪಿ, ಸೆ.29 (ಉಡುಪಿ ಟೈಮ್ಸ್ ವರದಿ) : ನಗರದ ಪಿಎಫ್‍ಐ ಮತ್ತು ಎಸ್‍ಡಿಪಿಐ ಕಚೇರಿಗಳ ಮೇಲೆ ರಾತ್ರೋರಾತ್ರಿ ದಾಳಿ ನಡೆಸಿದ ಉಡುಪಿ ಪೊಲೀಸರು ತಪಾಸಣೆ ಕೈಗೊಂಡು ಪಿ.ಎಫ್.ಐ ಗೆ ಸಂಬಂಧಿಸಿದ ದಾಖಲೆಗಳು ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಪಿ.ಎಫ್.ಐ ಮತ್ತು ಅದರ ಹಲವು ಇತರ ಸಹವರ್ತಿ ಸಂಘಟನೆಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದ ಹಿನ್ನೆಲೆಯಲ್ಲಿ ಉಡುಪಿ ಪೊಲೀಸರು ಜಿಲ್ಲೆಯಲ್ಲೂ ಕ್ರಮ ಕೈಗೊಂಡಿದ್ದಾರೆ. ಪಿ.ಎಫ್.ಐ ತಮ್ಮ ಚಟುವಟಿಕೆಗಳಿಗೆ ಎಸ್.ಡಿ.ಪಿ.ಐ ಕಚೇರಿಗಳನ್ನು ಬಳಸಿಕೊಳ್ಳುತ್ತಿತ್ತು ಎಂದು ತಿಳಿದು ಬಂದಿದ್ದು, ಹೂಡೆ, ಗಂಗೊಳ್ಳಿ, ಉಡುಪಿಯಲ್ಲಿ ಎಸ್‍ಡಿಪಿಐ ಕಚೇರಿಗಳನ್ನು ವಶಪಡಿಸಿಕೊಂಡಿದ್ದಾರೆ. ಇದಲ್ಲದೆ ಎಸ್‍ಡಿಪಿಐ ಮುಖಂಡ ನಜೀರ್ ಮತ್ತು ಬಶೀರ್ ಅವರ ಮನೆ ಮೇಲೂ ಪೊಲೀಸರು ದಾಳಿ ನಡೆಸಿದ್ದಾರೆ. ಆದರೆ ಅವರ ಮನೆಗಳಿಗೆ ಬೀಗ ಹಾಕಿದ್ದರಿಂದ ಅವರು ಹಿಂತಿರುಗಿದ್ದಾರೆ ಎಂದು ಮೂಲಗಳು ತಿಳಿಸಿವೆ.