ಗೋವಾ; ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾದೇಶಿ ಪ್ರಜೆಗಳ ಬಂಧನ
ಪಣಜಿ ಸೆ.27 : ಭಾರತದ ನಾಗರಿಕರಂತೆ ನಟಿಸುತ್ತ ಗೋವಾ ರಾಜ್ಯದಲ್ಲಿ ಕೆಲವು ದಿನಗಳಿಂದ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾದೇಶಿ ಪ್ರಜೆಗಳನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ.
ಗೋವಾದ ಅರಳಿ, ಸಶಷ್ಠಿ ಎಂಬಲ್ಲಿ ನೆಲೆಸಿದ್ದ ಶಾಹೀನ್ ಕರೀಮ್ (40) ಮತ್ತು ಫಜಲ್ ಕರೀಮ್ (50) ಬಂಧಿಸಲ್ಪಟ್ಟ ಬಾಂಗ್ಲಾದೇಶಿ ಪ್ರಜೆಗಳು.
ಈ ಇಬ್ಬರು ಬಾಂಗ್ಲಾದೇಶದ ನಾರಾಯಣಗಂಜ್ ನ ಧರ್ಮಗಂಜ್ ನವರು ಎನ್ನಲಾಗಿದ್ದು, ಇವರಿಬ್ಬರೂ ಗೋವಾದ ಭಂಗರವಾಡದಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಆದರೆ ಇವರಿಬ್ಬರು ಏನಾದರೂ ಅಪರಾಧ ಮಾಡಿದ್ದಾರೆಯೇ, ಗೋವಾದಲ್ಲಿ ಉಳಿಯಲು ಅವರಿಗೆ ಬೇರೆ ಉದ್ದೇಶವಿದೆಯೇ ಎಂಬ ಬಗ್ಗೆ ಕೊಲ್ವಾಲ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇಬ್ಬರ ಬಗ್ಗೆ ಮಾಹಿತಿ ಪಡೆದ ಕೊಲ್ವಾಲ ಪೊಲೀಸರು ಇಬ್ಬರನ್ನು ಗೋವಾದ ಸಶಷ್ಟಿ, ಅರ್ಲಿಯಲ್ಲಿ ಬಂಧಿಸಿದ್ದರೆ. ಇವರ ವಿರುದ್ಧ ಬಾಂಗ್ಲಾದೇಶದೊಂದಿಗೆ ಮಾಡಿಕೊಂಡಿರುವ ಒಪ್ಪಂದದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಕೊಲ್ವಾಲ್ ಪೊಲೀಸರು ಮಾಹಿತಿ ನೀಡಿದ್ದಾರೆ.