ನಮ್ಮ ಉಡುಪಿ ನಮ್ಮ ಹೆಮ್ಮೆ
ನೀಲಾವರ ಸುರೇಂದ್ರ ಅಡಿಗ
ಅಧ್ಯಕ್ಷರು, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್
ಉಡುಪಿ ಜಿಲ್ಲೆಯಾಗಿ 25 ವರ್ಷ ಪೂರೈಸಿರುವುದು ತುಂಬಾ ಸಂತಸದ ಸಂಗತಿ, ಸಾಕಷ್ಟು ಕ್ಷೇತ್ರಗಳಲ್ಲಿ ಉಡುಪಿ ಜಿಲ್ಲೆ ಮಾದರಿಯ ಅಭಿವೃದ್ಧಿಯನ್ನು ಸಾಧಿಸಿರುವುದು ನಮಗೆ ಖುಷಿಯ ವಿಚಾರ. ಆರೋಗ್ಯ,ಶಿಕ್ಷಣ ಕ್ಷೇತ್ರದಲ್ಲಿ ಇಲ್ಲಿನ ಅಭಿವೃದ್ಧಿ ಇಡೀ ವಿಶ್ವಕ್ಕೆ ಮಾದರಿಯಾದದ್ದು, ಆದರೆ ಇನ್ನೂ ಕೆಲವು ವಿಷಯಗಳ ಬಗ್ಗೆ ನಾವು ಹೆಚ್ಚಿನ ಒತ್ತು ಕೊಡಬೇಕಿದೆ. ಜಿಲ್ಲೆಯಲ್ಲಿ ಪ್ಲಾಸ್ಟಿಕ್ ನಿಷೇಧ ಆಗಬೇಕು. ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಬಳಕೆ ಕಡಿಮೆ ಆಗಬೇಕು. ಕೃಷಿಗೆ ಒತ್ತು ನೀಡುವ ಕೆಲಸ ಇನ್ನು ಹೆಚ್ಚಿನ ವೇಗ ಪಡೆದುಕೊಳ್ಳಬೇಕು. ಬೆಟ್ಟ ಗುಡ್ಡ ಏರು ತಗ್ಗು ಪ್ರದೇಶಗಳು ಇರುವುದರಿಂದ ತೋಡುಗಳಿಗೆ ಮರದ ಸಂಕಗಳನ್ನು ಬಳಸುತ್ತಾರೆ. ಇದರಿಂದ ಮಳೆಗಾಲದಲ್ಲಿ ಸಮಸ್ಯೆಯಾಗುತ್ತಿರುವುದರಿಂದ ಉಡುಪಿ ಜಿಲ್ಲೆಯಲ್ಲಿರುವ ಕಾಲು ಸಂಕಗಳನ್ನು ಗುರುತಿಸಿ ಅಲ್ಲಿ ಕಿರು ಸೇತುವೆಗಳನ್ನು ನಿರ್ಮಾಣ ಮಾಡಿದರೆ ಅನುಕೂಲವಾಗಲಿದೆ. ಹೋಟೆಲ್ ಉದ್ಯಮದಲ್ಲಿ ಇಡೀ ದೇಶಕ್ಕೆ ಮಾದರಿಯಾದಂತಾಗಿದ್ದು. ಉದ್ಯಮಕ್ಕೆ ಹೆಚ್ಚು ಒತ್ತು ನೀಡಬೇಕು. ಯುವಕರಿಗೆ ಹೆಚ್ಚು ಉತ್ತೇಜಿಸುವಂತಹ ಕೆಸಲ ಆಗಬೇಕಾಗಿದೆ. ಸಾಕ್ಷರತೆಯಲ್ಲಿ ನಾವು ಗಣನೀಯ ಪ್ರಮಾಣದಲ್ಲಿ ಅಭಿವೃದ್ಧಿ ಹೊಂದಿದ್ದೇವೆ. ಆದ್ದರಿಂದ ನಮ್ಮ ಜಿಲ್ಲೆಯ ಯುವಕರು ಕೂಡಾ ಐಎಎಸ್, ಕೆಎಎಸ್ ನಂತಹ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೊಡಗಿಕೊಳ್ಳುವಂತಾಗಬೇಕು. ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಉಡುಪಿ ಯುವಕರು ಉನ್ನತ ಹುದ್ದೆಯನ್ನು ಸೇರುವಂತಾಗಬೇಕು. ರಾಜ್ಯದ ಸಾಂಸ್ಕøತಿಕ ರಾಜಧಾನಿ ಯಾವುದು ಎಂದರೆ ನಾವು ಉಡುಪಿ ಜಿಲ್ಲೆ ಎಂದು ಹೆಮ್ಮೆಯಿಂದ ಹೇಳಬಹುದು. ಆದರೆ ಬದಲಾದ ಕಾಲಘಟ್ಟದಲ್ಲಿ ಸಮ್ಮ ಜನಪದ ಕಲೆಗಳ ಮೂಲ ಸ್ವರೂಪ ವ್ಯತ್ಯಾಸ ಆಗುತ್ತಿದ್ದು, ಅದನ್ನು ನಾವುಗಳೇ ಸರಿಪಡಿಸಿಕೊಳ್ಳಬೇಕು. ಸರಕಾರ ಈಗಾಗಲೇ ನಿಗದಿ ಪಡಿಸಿರುವ ಜಾಗದಲ್ಲಿ ಮುಂದಿನ ಒಂದು ವರ್ಷದೊಳಗೆ ಕನ್ನಡ ಸಾಹಿತ್ಯ ಪರಿಷತ್ತಿನ ಭವ್ಯವಾದ ಕಟ್ಟಡ ನಿರ್ಮಿಸಲು ಸರಕಾರ ಸಹಕಾರ ನೀಡಬೇಕು ಈ ಮೂಲಕ ಕನ್ನಡ ಚಟುವಟಿಕೆಗಳನ್ನು ನಿರಂತರ ನಡೆಸಲು ಅನುಕೂಲವಾಗಲಿದೆ.