ದೇವಾಲಯಗಳ ಸೇವೆಗೆ ಷರತ್ತಿನೊಂದಿಗೆ ಅಸ್ತು ನೀಡಿದ ಸರಕಾರ

ಬೆಂಗಳೂರು (ಉಡುಪಿ ಟೈಮ್ಸ್ ವರದಿ) : ರಾಜ್ಯದಲ್ಲಿ ಸೆಪ್ಟೆಂಬರ್ 1 ರಿಂದ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ದೇವಾಲಯಗಳು ಹಾಗೂ ಸಂಸ್ಥೆಗಳಲ್ಲಿ ಸೇವೆಗಳನ್ನು ಪುನರ್ ಪ್ರಾರಂಭಿಸುವ ಬಗ್ಗೆ ಭಕ್ತಾಧಿಗಳಿಂದ ಬೇಡಿಕೆ ಬರುತ್ತಿರುವ ಹಿನ್ನೆಲೆಯಲ್ಲಿ ಭಕ್ತಾಧಿಗಳ ಹಿತದೃಷ್ಟಿಯಿಂದ ದೇವಾಲಯಗಳಲ್ಲಿ ಷರತ್ತಿನೊಂದಿಗೆ ದೈನಂದಿನ ಸೇವೆಗಳನ್ನು ಪ್ರಾರಂಭಿಸಲು ಧಾರ್ಮಿಕ ದತ್ತಿ ಇಲಾಖೆ ಹೊಸ ಆದೇಶ ನೀಡಿದೆ.

ಭಕ್ತಾದಿಗಳ ಒತ್ತಡಕ್ಕೆ ಮಣಿದ ಸರಕಾರ ಇದೀಗ ಸೇವೆಗಳನ್ನು ಪುನರ್ ಆರಂಭಿಸಲು ಆದೇಶ ನೀಡಿದೆ. ಆಯಾಯ ದೇವಾಲಯಗಳ ಸಂಪ್ರದಾಯಗಳಿಗೆ ಅನುಗುಣವಾಗಿ ಈ ಹಿಂದೆ ನಡೆಸುತ್ತಿದ್ದ ಸೇವೆಗಳನ್ನು ಭಕ್ತರ ಸಂಖ್ಯೆ ಹಾಗೂ ಸ್ಥಳಾವಕಾಶದ ಲಭ್ಯತೆ ಆಧಾರದ ಮೇಲೆ ನಡೆಸಬಹುದಾದ ಸೇವೆಗಳ ಸಂಖ್ಯೆಗಳನ್ನು ಆಯಾಯ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಗಳು, ಆಡಳಿತಾಧಿಕಾರಿಗಳು, ಅನುವಂಶಿಕ ಮೊಕ್ತೇಸರು ನೀಡತಕ್ಕದ್ದು

ಷರತ್ತುಗಳು
1 . ದೇವಾಲಯಗಳಲ್ಲಿ ಜಾತ್ರೆ ಉತ್ಸವಗಳು, ಬ್ರಹ್ಮರಥೋತ್ಸವ | ಪವಿತ್ರೋತ್ಸವ ಮುಂತಾದ ವಿಶೇಷ ಉತ್ಸವ ನಡೆಸುವಂತಿಲ್ಲ

2 .ದೇವಾಲಯದ ಸಂಪ್ರದಾಯದಂತೆ ದೇವಾಲಯಗಳಲ್ಲಿ ಜಾತ್ರೆ ಉತ್ಸವ, ವಿಶೇಷ ಉತ್ಸವಗಳನ್ನು ದೇವಾಲಯದ ಅರ್ಚಕರು ಮತ್ತು ಸಿಬ್ಬಂದಿಯವರು ಸಾಂಕೇತಿಕವಾಗಿ ಉತ್ಸವಗಳನ್ನು ದೇವಾಲಯದ ಆವರಣದೊಳಗೆ ಉತ್ಸವ ದಿನಗಳಲ್ಲಿ ಸಾರ್ವಜನಿಕರ ಸಂದಣಿ ಇಲ್ಲದಂತೆ ನಡೆಸಿ ಪೂರ್ಣಗೊಳಿಸುವುದು.

3) ಕೋವಿಡ್-19 (ಕರೋನಾ ವೈರಸ್) ಹರಡುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ / ರಾಜ್ಯ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳು ಹಾಗೂ ಈ ಕಛೇರಿಯ ನಿರ್ದೇಶನ ಗಳಂತೆ ಸಾಮಾಜಿಕ ಅಂತರ ಹಾಗೂ ಇತರೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಹಾಗೂ ಆಯಾಯ ಜಿಲ್ಲಾಧಿಕಾರಿಗಳು ಹಾಗೂ ಸ್ಥಳೀಯ ಸಂಸ್ಥೆಗಳು ಹೊರಡಿಸಿರುವ ಹಾಗೂ ಹೊರಡಿಸುವ ಆದೇಶಗಳನ್ನು ಪಾಲಿಸತಕ್ಕದ್ದು.

4) ದೇವಾಲಯಗಳಲ್ಲಿ ಸಾಮಾಜಿಕ ಅಂತರ ಕಾಪಾಡುವ ಹಾಗೂ ಸ್ಯಾನಿಟೈಸರ್ ಕುಳಿತು ಕೈಗೊಂಡಿರುವ ಕ್ರಮಗಳ ಬಗ್ಗೆ ಸಂಬಂಧಪಟ್ಟ ಉಪವಿಭಾಗಾಧಿಕಾರಿಗಳ,ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತರುಗಳು ಖಾತರಿ ಪಡಿಸತಕ್ಕದ್ದು ಹಾಗೂ ಯಾವುದೇ ಕಾರಣಕ್ಕೂ ಈ ಮೇಲಿನ ನಿಯಮ ಉಲಂಘನೆಯಾಗುವಂತಿಲ್ಲ ಎಂದು ಆದೇಶದಲ್ಲಿ ಉಲ್ಲೇಖಿಸಿದೆ.

Leave a Reply

Your email address will not be published. Required fields are marked *

error: Content is protected !!