ಉಡುಪಿ: ಕಾರಿನಿಂದ ಲ್ಯಾಪ್ ಟ್ಯಾಪ್ ಕಳವು: ಎರಡು ಪ್ರತ್ಯೇಕ ಪ್ರಕರಣ ದಾಖಲು
ಉಡುಪಿ: ನಿಲ್ಲಿಸಿದ್ದ ಕಾರಿನಿಂದ ಲ್ಯಾಪ್‍ಟಾಪ್ ಕಳವು ಮಾಡಿರುವ ಎರಡು ಪ್ರತ್ಯೇಕ ಪ್ರಕರಣ ಉಡುಪಿ ನಗರದಲ್ಲಿ ನಡೆದಿದೆ. ಒಂದು ಪ್ರಕರಣದಲ್ಲಿ ಮಾ.11 ರಂದು ಕೊರಂಗ್ರಪಾಡಿಯ ರಕ್ಷಾ ಯು ಎಂಬವರು,ಉಡುಪಿಯ ಮೂಡನಿಡಂಬೂರು ಗ್ರಾಮದ ಉಡುಪಿ ಸಿಟಿ ಬಸ್ ನಿಲ್ದಾಣದ ಬಳಿ ರಸ್ತೆಯ ಬದಿಯಲ್ಲಿ ತಮ್ಮ ಕಾರು ನಿಲ್ಲಿಸಿದ್ದರು. ಈ ವೇಳೆ ಕಳ್ಳರು ಕಾರಿನ ಹಿಂಭಾಗದ ಬಾಗಿಲಿನ ಗ್ಲಾಸ್ ಮುರಿದು ಕಾರಿನಲ್ಲಿದ್ದ 25,000 ರೂ. ಮೌಲ್ಯದ ಲಾಪ್‍ಟಾಪ್‍ನ್ನು ಕಳವು ಮಾಡಿದ್ದಾರೆ. ಅಲ್ಲದೆ ಕಳ್ಳರು ಗ್ಲಾಸ್ ಒಡೆದಿರುವ ಪರಿಣಾಮ 4,000 ರೂ. ನಷ್ಟ ಉಂಟಾಗಿರುತ್ತದೆ ಎಂದು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಡಾ. ನಮನ್ ಅಗಾರ್ವಾಲ್ ಎಂಬವರು ಮೂಡನಿಡಂಬೂರು ಗ್ರಾಮದ ಉಡುಪಿ ಬೃಂದಾವನ ಸರ್ಕಲ್ ಬಳಿ ನಿಲ್ಲಿಸಿದ್ದ ಕಾರಿನ ಹಿಂಭಾಗದ ಬಾಗಿಲಿನ ಗ್ಲಾಸ್ ಮುರಿದು ಕಾರಿನಲ್ಲಿದ್ದ 70,000 ರೂ. ಮೌಲ್ಯದ ಲಾಪ್‍ಟಾಪ್‍ನ್ನು ಕಳವು ಮಾಡಿದ್ದಾರೆ. ಅಲ್ಲದೆ ಕಾರಿನ ಗ್ಲಾಸ್ ಒಡೆದಿರುವುದರಿಂದ 20,000 ರೂ ನಷ್ಟ ಉಂಟಾಗಿದೆ ಎಂದು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.