ಉಪ್ಪಿನಂಗಡಿ: ಚಿನ್ನಾಭರಣ ಮಳಿಗೆಗೆ ಕನ್ನ, 25 ಲಕ್ಷ ಮೌಲ್ಯದ ಚಿನ್ನಾಭರಣ ಕಳವು
ಉಪ್ಪಿನಂಗಡಿ: ಪ್ರಸಿದ್ದ ಚಿನ್ನಾಭರಣ ಮಳಿಗೆಯೊಂದಕ್ಕೆ ಕನ್ನ ಹಾಕಿದ ದರೋಡೆಕೋರರು ಸರಿ ಸುಮಾರು 25 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಉಪ್ಪಿನಂಗಡಿಯಲ್ಲಿ ನಡೆದಿದೆ.
ಉಪ್ಪಿನಂಗಡಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬೀದಿಯಲ್ಲಿರುವ ಆರ್.ಕೆ. ಜ್ಯುವೆಲ್ಲರ್ಸ್ ನಲ್ಲಿ ಈ ಕಳ್ಳತನ ಪ್ರಕರಣ ವರದಿಯಾಗಿದೆ. ಶುಕ್ರವಾರ ನಸುಕಿನ ಜಾವ ಮೂರು ಗಂಟೆ ಸುಮಾರಿಗೆ ಚಿನ್ನದ ಮಳಿಗೆ ಶೆಟರ್ ಬೀಗವನ್ನು ಗ್ಯಾಸ್ ಕಟರ್ ಮೂಲಕ ತುಂಡರಿಸಿದ ಕಳ್ಳರು ಮಳಿಗೆಯಲ್ಲಿದ್ದ ಸುಮಾರು 25 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದಾರೆ.
ಇದೇ ವೇಳೆ ಅಂಗಡಿಯ ಸಿಸಿಟಿವಿ ಸಂಪರ್ಕ ಕಡಿತಗೊಳಿಸಿರುವ ಕಳ್ಳರು ಸಿಸಿಟಿವಿ ಹಾರ್ಡ್ ಡಿಸ್ಕ್ ಅನ್ನು ಸಹ ಹೊತ್ತೊಯ್ದಿದ್ದಾರೆ. ಅಂಗಡಿಯ ಬಾಗಿಲ ಬಳಿ ಬಾಗಿಲು ಮುರಿಯಲು ಬಳಸಿರುವ ವೆಲ್ಡಿಂಗ್ ಗೆ ಬಳಸುವ ಸಿಲೆಂಡರ್, ಎರಡು ಅನಿಲ ಸಿಲೆಂಡರ್, ಗ್ಯಾಸ್ ಕಟರ್ ಗಳು ಪತ್ತೆಯಾಗಿದೆ.
ಉಪ್ಪಿನಂಗಡಿ ಪೇಟೆಗೆ ಓರ್ವ ಕಾವಲುಗಾರನಿದ್ದು ಆತ ಹೆಚ್ಚಾಗಿ ಚಿನ್ನದಂಗಡಿಯ ಸಮೀಪವೇ ಇರುತ್ತಿದ್ದನೆನ್ನಲಾಗಿದೆ. ಆದರೆ ಆತ ಊರು ಗಸ್ತಿಗೆ ಹೋಗಿದ್ದಾಗ ಕಳ್ಳರು ಈ ಕೃತ್ಯ ಎಸಗಿರುವುದ್ಗಾಇ ಹೇಳಲಾಗಿದೆ.
ಉಪ್ಪಿನಂಗಡಿ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು ತನಿಖೆ ಕೈಗೊಂಡಿದ್ದಾ