ಮತಪ್ರಚಾರಕ್ಕೆ ಪೇಜಾವರ ಶ್ರೀ ಹೆಸರು ದುರ್ಬಳಕೆಗೆ ಆಕ್ರೋಶ

ಉಡುಪಿ  : ಅನೇಕ‌ ಕುತಂತ್ರಗಳನ್ನು ಬಳಸಿ ನಾಡಿನಲ್ಲಿ‌ ಕ್ರೈಸ್ತಮತ ಪ್ರಚಾರ ನಡೆಸುತ್ತಿದ್ದವರು ಈಗ ಈ ದುಷ್ಕೃತ್ಯಕ್ಕೆ ಶ್ರೀ ಪೇಜಾವರ ಶ್ರೀಗಳ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಿರುವುದಕ್ಕೆ ಹಿಂದೂ ಮುಖಂಡ ವಾಸುದೇವಭಟ್ ಪೆರಂಪಳ್ಳಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಮ್ಮ ಪವಿತ್ರ ಗ್ರಂಥ ಭಗವದ್ಗೀತೆಯ ಬದಲಿಗೆ ಬೈಬಲ್ ಓದುವಂತೆ ಒತ್ತಾಯಿಸುವುದು, ಮುಗ್ಧ ಹಾಗೂ ಬಡ ಹಿಂದೂಗಳ ಮನೆಯ ತುಳಸಿ‌ಕಟ್ಟೆಗಳನ್ನು ಆ ಮನೆಯವರ ಕೈಯಿಂದಲೇ ಧ್ವಂಸ ಮಾಡಿಸುವುದು., ಕ್ರೈಸ್ತ ಶಾಲೆಗಳಲ್ಲಿ ನಮ್ಮ ಮಕ್ಕಳಿಗೆ ನಮ್ಮ ಸಾಂಪ್ರದಾಯಿಕ‌,ಉಡುಗೆ ತೊಡುಗೆಗಳನ್ನು ನಿರ್ಬಂಧಿಸುವುದು , ಬಾಲಕೃಷ್ಣನ ಉತ್ಸವಕ್ಕೆ ಪ್ರತಿಯಾಗಿ ಬಾಲಯೇಸು ಉತ್ಸವ ನಡೆಸುವುದು , ನಮ್ಮ ದೇವಾಲಯಗಳಂತೆ ಕ್ರೈಸ್ತ ಪ್ರಾರ್ಥನಾ ಕೇಂದ್ರಗಳಲ್ಲೂ ಧ್ವಜ ಸ್ತಂಭಗಳನ್ನು ಸ್ಥಾಪಿಸಿ ಹಿಂದೂಗಳಲ್ಲಿ ಗೊಂದಲ ಹುಟ್ಟಿಸುವುದೇ ಮೊದಲಾದ ಕುಟಿಲ‌ನೀತಿಗಳನ್ನು ಅನುಸರಿಸಿ ಕ್ರೈಸ್ತಮತ ಪ್ರಚಾರ ನಡೆಸುವ ವ್ಯವಸ್ಥಿತ ಜಾಲ ಸಮಾಜದಲ್ಲಿ ಇವೆ.

ಇದೀಗ ಈ ಸಾಲಿಗೆ ಹೊಸ ಸೇರ್ಪಡೆಯಾಗಿದೆ. ತಾನು ಸ್ವತಃ ಶ್ರೀ ಪೇಜಾವರ ಶ್ರೀಗಳ ಸಹೋದರ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬರು ಬೆಂಗಳೂರಿನ ಕ್ರೈಸ್ತ ಧರ್ಮದ ಪ್ರಾರ್ಥನಾಲಯಗಳಲ್ಲಿ ಮತ ಪ್ರಚಾರ ನಡೆಸುತ್ತಿರುವುದು ಪತ್ತೆಯಾಗಿದೆ. ಇದು ಅತ್ಯಂತ ಖಂಡನೀಯ ಮತ್ತು ಅಕ್ಷಮ್ಯ. ಜೀವನ ಪರ್ಯಂತ ಪೇಜಾವರ ಶ್ರೀಗಳು ಗೋಹತ್ಯೆ ,ಜಿಹಾದಿ ಉಗ್ರವಾದ ಮತಾಂತರದಂಥಹ ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಟ ನಡೆಸಿಕೊಂಡು ಬರುತ್ತಿದ್ದಾರೆ.

ಭೂ ವೈಕುಂಠವೆನಿಸಿದ ತಿರುಪತಿಯಲ್ಲೂ ಇವರ ಕುತಂತ್ರಗಳು ಅದರ ವಿರುದ್ಧ ನಡೆದಾಗ ದೇಶಾದ್ಯಂತ ಸಾಧು ಸಂತರನ್ನು ಸಂಘಟಿಸಿ ಹೋರಾಟ ನಡೆಸಿದವರು ಪೇಜಾವರ ಶ್ರೀಗಳು . ಇದೀಗ ಅವರ ಹೆಸರನ್ನೇ ತಮ್ಮ ಮತಪ್ರಚಾರಕ್ಕೆ ಬಳಸಿಕೊಳ್ಳುವ ತಂತ್ರಗಳ ವಿರುದ್ಧ ಹೋರಾಟ ನಡೆಸಬೇಕಾದೀತು.‌ ಇಂಥ ದುಷ್ಕೃತ್ಯಗಳನ್ನು ನಡೆಸುವವರ ವಿರುದ್ಧ ಕೂಡಲೇ ಉಗ್ರ ಕ್ರಮಗಳನ್ನು ಕೈಗೊಳ್ಳುವಂತೆ ವಾಸುದೇವ ಭಟ್ ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!