ಕಾರ್ಕಳ: ಮೇಕ್ ಸಂಒನ್ ಸ್ಮೈಲ್ ಹೆಲ್ಪಿಂಗ್ ಹ್ಯಾಂಡ್ ತಂಡದಿಂದ ಕನ್ನಡ ಶಾಲೆಗಳ ಅಭಿವೃದ್ಧಿ

ಕಾರ್ಕಳ, ಜೂ.1 (ಉಡುಪಿ ಟೈಮ್ಸ್ ವರದಿ): ಮೇಕ್ ಸಂಒನ್ ಸ್ಮೈಲ್ ಹೆಲ್ಪಿಂಗ್ ಹ್ಯಾಂಡ್ ತಂಡ ಪ್ರತಿ ವರ್ಷ ಹಲವಾರು ಸರಕಾರಿ ಕನ್ನಡ ಮಾಧ್ಯಮ ಶಾಲೆಗಳನ್ನು ನವೀಕರಿಸುವ ಮೂಲಕ ಕನ್ನಡ ಶಾಲೆಗಳ ಅಭಿವೃದ್ಧಿ ಮಾಡುತ್ತಾ ಬಂದಿದೆ.

ಅದರಂತೆ ಈ ವರ್ಷ ಮೇ29 ಕಾರ್ಕಳದ ಸಾಣೂರಿನ ಸರಕಾರಿ ಪದವಿ ಪೂರ್ವ ಕಾಲೇಜಿನ ಹೈಸ್ಕೂಲ್ ವಿಭಾಗವನ್ನು ಸುಂದರವಾಗಿ ಪೈಂಟ್ ಮಾಡುವ ಮುಖೇನ ಶಾಲೆಯನ್ನು ಸುಂದರಗೊಳಿಸಿದೆ. ಶಾಲೆಯ ಗೋಡೆಗಳನ್ನುರಾಷ್ತ್ರೀಯ ನಾಯಕರಾದಂತ “ಸ್ವಾಮಿ ವಿವೇಕಾನಂದರು, ಬಿ.ಆರ್ ಅಂಬೇಡ್ಕರ್, ಹಾಗೂ ಪುನೀತ್ ರಾಜಕುಮಾರ್, ಸರ್ ಎಂ ವಿಶ್ವೇಶ್ವರಯ್ಯ, ಸಾಲುಮರದ ತಿಮ್ಮಕ್ಕ, ರತನ್ ಟಾಟಾ, ಭಗತ್ ಸಿಂಗ್, ಮದರ್ ಥೆರೆಸಾ, ಅಬ್ದುಲ್ ಕಲಾಂ, ಸುಭಾಸ್ ಚಂದ್ರಭೋಸ್ ರಂಥ ಮಹಾನ್ ನಾಯಕರ ಚಿತ್ರಗಳನ್ನು ಸುಂದರವಾಗಿ ಮೂಡಿಸುವ ಮೂಲಕ ಈ ಶಾಲೆಯನ್ನು ಆಕರ್ಷಕವಾಗಿ ಕಾಣುವಂತೆ ಮಾಡಿದ್ದಾರೆ.

ಹಾಗೂ ಇದರ ಅಂಗವಾಗಿ ಮೇ 26 ರಂದು ಶಾಲೆಯ ಮಕ್ಕಳಿಗೆ ಮನರಂಜನಾ ಕಾರ್ಯಕ್ರಮದೊಂದಿಗೆ 10 ನೇ ತರಗತಿಯಲ್ಲಿ ಅಧಿಕ ಅಂಕಗಳಿಸಿದ ಸುಮಾರು 4 ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಈ ವೇಳೆ ಮದ್ಯಾಹ್ನದ ವಿಶೇಷ ಊಟದ ವ್ಯವಸ್ಥೆಯು ಈ ತಂಡದ ವತಿಯಿಂದ ಮಾಡಲಾಯಿತು.

ಮೇಕ್ ಸಂಒನ್ ಸ್ಮೈಲ್ ಹೆಲ್ಪಿಂಗ್ ಹ್ಯಾಂಡ್ ತಂಡ ಕನ್ನಡ ಶಾಲೆಗಳ ಉಳಿವಿಗಾಗಿ ಬಹಳಷ್ಟು ಶ್ರಮ ಪಡುತ್ತಿದೆ. “ವಿಲ್ ಮೇಕ್ ಇಟ್ ಕಲರ್ ಫುಲ್” ಎಂಬ ಪರಿಕಲ್ಪನೆಯಲ್ಲಿ ರಾಜ್ಯದ ವಿವಿಧ ಭಾಗದ ಸರಕಾರಿ ಕನ್ನಡ ಮಾಧ್ಯಮ ಶಾಲೆಗಳನ್ನು ಅಭಿವೃದ್ಧಿ ಮಾಡುತ್ತ ಬಂದಿದ್ದಾರೆ, ಈ ತಂಡ ಅನಾಥರ ಹುಟ್ಟುಹಬ್ಬ ಆಚರಣೆ, ವಿಕಲಚೇತನರಿಗೆ ನೆರವು, ಅನಾಥಾಶ್ರಮಗಳಿಗೆ ನೆರವು, ಬಡ ಮಕ್ಕಳ ವಿದ್ಯಾಭ್ಯಾಸ ಇಂತಹ ಇತರ ಹಲವಾರು ಸಮಾಜಮುಖಿ ಕೆಲಸ ಕಾರ್ಯವನ್ನು ಕಳೆದ ಸುಮಾರು 5 ವರ್ಷಗಳಿಂದ ಮಾಡುತ್ತಾ ಬಂದಿದೆ. 

Leave a Reply

Your email address will not be published. Required fields are marked *

error: Content is protected !!