ಅಲ್ಟ್ರಾಸೌಂಡ್ ಲ್ಯಾಬ್ ತಪ್ಪು ವರದಿ ನೀಡಿದ್ದ ಕ್ಲಿನಿಕ್’ಗೆ ರೂ.1.25 ಕೋ. ದಂಡ!

ಹೊಸದಿಲ್ಲಿ ಜೂ.2: ವೈದ್ಯಕೀಯ ನಿರ್ಲಕ್ಷ್ಯ ಪ್ರಕರಣವೊಂದಕ್ಕೆ ಸಂಬಂಧಿಸಿ ತಪ್ಪು ವರದಿ ನೀಡಿದ ನಾಗ್ಪುರದ ಅಲ್ಟ್ರಾಸೌಂಡ್ ಲ್ಯಾಬ್ ಒಂದಕ್ಕೆ  ರಾಷ್ಟ್ರೀಯ ಗ್ರಾಹಕ ಆಯೋಗ (ಎನ್‍ಸಿಆರ್‍ಡಿಸಿ)  1.25 ಕೋ. ರೂ. ದಂಡ ವಿಧಿಸಿದೆ.

ಪ್ರಕರಣಕ್ಕೆ ಸಂಬಂಧಿಸಿ ಲ್ಯಾಬ್ ಗೆ ದಂಡ ವಿಧಿಸಿರುವ ಆಯೋಗ ದಿವ್ಯಾಂಗ ಮಗು ಹಾಗೂ ಆತನ ಪೋಷಕರಿಗೆ 1.2 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಆದೇಶಿಸಿದೆ. ನ್ಯಾಯಮೂರ್ತಿ ಆರ್.ಕೆ. ಅಗರ್‍ವಾಲ್ ಮತ್ತು ಎಸ್.ಎಂ.ಕಾಂತಿಕರ್ ಅವರನ್ನು ಒಳಗೊಂಡ ಎನ್‍ಸಿಡಿಆರ್‍ ಸಿ ಪೀಠ ಈ ಐತಿಹಾಸಿಕ ತೀರ್ಪು ನೀಡಿದ್ದು, ಇಮೇಜಿಂಗ್ ಪಾಯಿಂಟ್ ಹೆಸರಿನ ಕ್ಲಿನಿಕ್ ಅನ್ನು ರೇಡಿಯಾಲಜಿ ತಜ್ಞ ಡಾ.ದಿಲೀಪ್ ನಿರ್ವಹಿಸುತ್ತಿದ್ದರು. ಭ್ರೂಣದ 17-18ನೇ ವಾರದಲ್ಲಿ ದೋಷವನ್ನು ಪತ್ತೆ ಮಾಡಲು ವಿಫಲರಾದ ಅವರನ್ನು ಹಾಗೂ ಕ್ಲಿನಿಕ್ ಅನ್ನು ಹೊಣೆ ಮಾಡಿರುವ ಆಯೋಗ, ಮಗುವಿನ ಕಲ್ಯಾಣಕ್ಕೆ, ಭವಿಷ್ಯದ ವೆಚ್ಚಗಳಿಗೆ, ಚಿಕಿತ್ಸೆಗೆ ಹಾಗೂ ಕೃತಕ ಕಾಲು ಖರೀದಿಗೆ ಪರಿಹಾರವನ್ನು ನೀಡುವಂತೆ ಆದೇಶಿಸಿದೆ.

ಮಹಿಳೆ ಗರ್ಭಿಣಿಯಾಗಿದ್ದಾಗ ನಡೆಸಿದ ನಾಲ್ಕು ಅಲ್ಟ್ರಾಸೌಂಡ್ ಪರೀಕ್ಷೆಯ ಬಗ್ಗೆ ತಪ್ಪು ವರದಿ ನೀಡಿದ್ದಕ್ಕಾಗಿ ಪ್ರಯೋಗಾಲಯವನ್ನು ಹೊಣೆ ಮಾಡಲಾಗಿದೆ. ನಿರ್ಲಕ್ಷ್ಯದ ಪರಿಣಾಮವಾಗಿ ಜನ್ಮಜಾತ ದೋಷವುಳ್ಳ ಮಗು ಹುಟ್ಟಿತ್ತು. ನವಜಾತ ಶಿಶುವಿನ ಬೆರಳುಗಳು, ಬಲಗಾಲಿನ ಮೊಣಕಾಲ ಕೆಳಗೆ ಹಾಗೂ ಎಡ ಪಾದದಲ್ಲಿ ದೋಷಗಳು ಕಂಡುಬಂದಿದ್ದು, ಜನ್ಮಜಾತ ಅಸ್ವಸ್ಥತೆ ಎಂದರೆ ರಚನಿಕ ಮತ್ತು ಕಾರ್ಯವಿಧಾನದ ವ್ಯತ್ಯಯಗಳಾಗಿದ್ದು, ಮಗು ಗರ್ಭಾವಸ್ಥೆಯ ಹಂತದಲ್ಲಿದ್ದಾಗ ಸಂಭವಿಸುತ್ತದೆ. ಆರಂಭಿಕ ಹಂತದಲ್ಲಿ ಇದ್ದ ದೋಷವನ್ನು ಪತ್ತೆ ಮಾಡಲು ಪ್ರಯೋಗಾಲಯ ವಿಫಲವಾಗಿರುವುದನ್ನು ಹಾಗೂ ಗರ್ಭಪಾತಕ್ಕೆ ಪ್ರಯೋಗಾಲಯ ಶಿಫಾರಸ್ಸು ಮಾಡದಿರುವುದನ್ನು ಆಯೋಗ ಉಲ್ಲೇಖಿಸಿದೆ. 

Leave a Reply

Your email address will not be published. Required fields are marked *

error: Content is protected !!