ಉಡುಪಿ ಲಯನ್ಸ್ ಕ್ಲಬ್: ಜಿಲ್ಲಾಸ್ಪತ್ರೆಗೆ ಪಿಸಿಯೋಥೆರಪಿ ಯಂತ್ರ, ಆಮ್ಲಜನಕ ಸಾಂದ್ರಕ ಹಸ್ತಾಂತರಿ

ಉಡುಪಿ: ಬಡವರು, ಜನಸಾಮಾನ್ಯರಿಗೆ ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ಸಿಗಬೇಕೆನ್ನುವ ನಿಟ್ಟಿನಲ್ಲಿ ಉಡುಪಿ ಲಯನ್ಸ್ ಕ್ಲಬ್ ವತಿಯಿಂದ ಲಯನ್ಸ್ 331 ಸಿ ಸಹಕಾರದೊಂದಿಗೆ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಒಂದು ಲಕ್ಷಕ್ಕೂ ಮಿಕ್ಕಿದ ಮೌಲ್ಯದ ಪಿಸಿಯೋಥೆರಪಿ ಮಿಶನ್ ಸಹಿತ ಸಲಕರಣೆ ಹಾಗೂ ಆಮ್ಲಜನಕ ಸಾಂದ್ರಕವನ್ನು ಮಂಗಳವಾರ ಹಸ್ತಾಂತರಿಸಲಾಯಿತು.

ದಾನಿಗಳಾದ ಡಾ. ಮನೋರಂಜನ್‌ದಾಸ್ ಹೆಗ್ಡೆ ಕೊಡ ಮಾಡಿದ ಪಿಸಿಯೋಥೆರಪಿ ಮಿಶನ್ ಹಾಗೂ ಲಯನ್ಸ್ 317 ಸಿ ನ ಜಿಲ್ಲಾ ಗವರ್ನರ್ ಎಚ್. ವಿಶ್ವನಾಥ್ ಶೆಟ್ಟಿ ಕೊಡಮಾಡಿದ ಆಮ್ಲಜನಕ ಸಾಂದ್ರಕವನ್ನು ಜಿಲ್ಲಾಸ್ಪತ್ರೆಯ ಜಿಲ್ಲಾ ಸರ್ಜನ್ ಡಾ.ಎಚ್. ಮಧುಸೂದನ್ ನಾಯಕ್ ಅವರಿಗೆ ಗಣ್ಯರು ಹಸ್ತಾಂತರಿಸಿದರು.

ಉಡುಪಿ ಲಯನ್ಸ್ ಕ್ಲಬ್ ಆರೋಗ್ಯ, ಶಿಕ್ಷಣ, ಸಾಮಾಜಿಕ ಚಟುವಟಿಕೆಯಲ್ಲಿ ಮುಂಚೂಣಿಯಲ್ಲಿದೆ. ಬಡ ಜರು ಮತ್ತು ಮಕ್ಕಳಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಜಿಲ್ಲಾಸ್ಪತ್ರೆಗೆ ಅಗತ್ಯವಾಗಿರುವ ಅತ್ಯುನ್ನತ ಗುಣಮಟ್ಟದ ಎರಡು ಸಾಧನಗಳನ್ನು ನೀಡಲಾಗಿದೆ. ಈ ಸೌಲಭ್ಯವನ್ನು ಅವಶ್ಯವುಳ್ಳ ರೋಗಿಗಳು ಪಡೆದುಕೊಳ್ಳಲಿ ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ಡಯನಾ ವಿಠಲ ಪೈ ತಿಳಿಸಿದರು.

ಈ ಸಂದರ್ಭ ಲಯನ್ಸ್ 317 ಸಿ ಜಿಲ್ಲಾ ಗವರ್ನರ್ ಎಚ್. ವಿಶ್ವನಾಥ್ ಶೆಟ್ಟಿ, ಉಡುಪಿ ಲಯನ್ಸ್ ಕ್ಲಬ್ ಅಧ್ಯಕ್ಷ ಡಯಾನಾ ವಿಠ್ಠಲ್ ಪೈ, ಜಿಲ್ಲಾ ಕೋಶಾಧಿಕಾರಿ ಜಯಪ್ರಕಾಶ್ ಭಂಡಾರಿ, ಉಡುಪಿ ಲಯನ್ಸ್ ಕ್ಲಬ್‌ನ ಕೋಶಾಕಾರಿ ವಿಷ್ಣುದಾಸ್ ಪಾಟೀಲ್, ಜಿಲ್ಲಾ ಮೆಂಟರ್ ಐಪಿಡಿಜಿ ಬಿ. ಜಯಕರ್ ಶೆಟ್ಟಿ ಇಂದ್ರಾಳಿ, ದಾನಿ ಡಾ.ಮನೋರಂಜನ ದಾಸ್ ಹೆಗ್ಡೆ, ಅಜ್ಜರಕಾಡು ಜಿಲ್ಲಾಸ್ಪತ್ರೆಯ ಪಿಸಿಯೋಥೆರಪಿಸ್ಟ್‌ಗಳಾದ ಡೆವಿಡ್ ರೋಶನ್ ಸೋನ್ಸ, ಲಿಸೆಂಡ್ರ ಮಚಾದೋ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!