ಉಡುಪಿ: ಶಾಲಾ‌ ಕಾಲೇಜ್ ಸಮೀಪವೇ ಒಳಚರಂಡಿ ಅವ್ಯವಸ್ಥೆ, ಕಣ್ಣುಮುಚ್ಚಿ ಕುಳಿತ ನಗರ ಸಭೆ

ಉಡುಪಿ ಮೇ 27 (ಉಡುಪಿ ಟೈಮ್ಸ್ ವರದಿ): ನಗರದ ಒಳಕಾಡು ವಾರ್ಡ್ ನ ಪಿಪಿಸಿ ಕಾಲೇಜಿನ ಸಮೀಪದ ರಸ್ತೆ ಮಧ್ಯ ಭಾಗದಲ್ಲಿ ಇರುವ ಮ್ಯಾನ್ ಹೋಲ್ ನಿಂದ ನೀರು ನಿರಂತರ ರಸ್ತೆಗೆ ಹರಿಯುತ್ತಿದ್ದು ಸಾರ್ವಜನಿಕರಿಗೆ ರಸ್ತೆಯಲ್ಲಿ ನಡೆದಾಟಕ್ಕೆ ಸಮಸ್ಯೆಯಾಗುತ್ತಿದೆ.

ದಿನ ನಿತ್ಯ ನೂರಾರು ಜನ‌ರು ಹಾಗೂ, ಶಾಲಾ‌ ಕಾಲೇಜ್ ಗಳಿಗೆ ಹೋಗುವ ವಿದ್ಯಾರ್ಥಿಗಳು ನಡೆದಾಡಲು ಈ ರಸ್ತೆಯನ್ನು ಅವಲಂಬಿಸಿದ್ದು ಇದೀಗ ಮ್ಯಾನ್ ಹೋಲ್ ನಿಂದ ತ್ಯಾಜ್ಯ ನೀರು ಹೊರ ಬಂದು ರಸ್ತೆ ಮೇಲೆ ಹರಿಯುತ್ತಿದ್ದು ಈ ಭಾಗದಲ್ಲಿ ಮೂಗು ಮುಚ್ಚಿಕೊಂಡು ನಡೆದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. 

ಇದೆ ರೀತಿ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದ ಬಳಿ ಮುಕುಂದ ಕೃಪಾ ಆಂಗ್ಲ ಮಾಧ್ಯಮ ಶಾಲೆಯ ಎದುರೇ ರಸ್ತೆಯಲ್ಲಿ ಹರಿದಾಡುತ್ತಿದೆ ಒಳಚರಂಡಿ ತ್ಯಾಜ್ಯ ನೀರು. ಶಾಲಾ‌ ಮಕ್ಕಳು ಇದರಲ್ಲೇ ನಡೆದಾಡಿಕೊಂಡು ಹೋಗುತ್ತಿದ್ದರು ನಗರ ಸಭೆ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಂತಿದೆ.

ಈ ಬಗ್ಗೆ ನಗರ ಸಭೆಗೆ ದೂರು ನೀಡಿದರೂ ಯಾವುದೇ  ಕ್ರಮಕೈಗೊಂಡಿಲ್ಲ ಎಂದು ಸ್ಥಳೀಯರು ದೂರಿದ್ದಾರೆ. ಹಾಗೂ ಶೀಘ್ರವಾಗಿ ಈ ಸಮಸ್ಯೆಯನ್ನು ಪರಿಹರಿಸುವಂತೆ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!