ಆಗಸ್ಟ್ 10: ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ಪದಗ್ರಹಣ
ಉಡುಪಿ (ಉಡುಪಿ ಟೈಮ್ಸ್ ವರದಿ): ಜಿಲ್ಲಾ 317-C ನ ಪ್ರಾಂತೀಯ 5ರ ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ಇದರ 2020-21ರ ಸಾಲಿನ ಕಾರ್ಯಕಾರಿ ಸಮಿತಿಯ ಪದಗ್ರಹಣ ಕಾರ್ಯಕ್ರಮವು, ಆಗಸ್ಟ್ 10 ರಂದು ಉದ್ಯಾವರ ಬಲಾಯಿಪಾದೆ ನಿತ್ಯಾನಂದ ಸಭಾ ಭವನದಲ್ಲಿ ಸಂಜೆ 5.30ಕ್ಕೆ ಜರುಗಲಿದೆ ಎಂದು ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ನ ಪ್ರಕಟನೆ ತಿಳಿಸಿದೆ. ಲಯನ್ಸ್ ಜಿಲ್ಲಾ ಜಿಎಲ್ಟಿ ಸಂಯೋಜಕರಾಗಿರುವ ಲ. ಸುನಿಲ್ ಸಾಲ್ಯಾನ್ Mjf, ಪದಗ್ರಹಣ ಅಧಿಕಾರಿಯಾಗಿ ಆಗಮಿಸಲಿದ್ದಾರೆ. ಪ್ರಾಂತೀಯ ಅಧ್ಯಕ್ಷ ಲ. ಸುನಿಲ್ ಶೆಟ್ಟಿ, ವಲಯಾಧ್ಯಕ್ಷ ಲ. ವಿ ಎಸ್ ರಾವ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. 2020-21 ಸಾಲಿನ ನೂತನ ಅಧ್ಯಕ್ಷರಾಗಿ ಲ. ಜೋನ್ ಫೆರ್ನಾಂಡಿಸ್, ಕಾರ್ಯದರ್ಶಿಯಾಗಿ ಲ. ಜೆರಾಲ್ಡ್ ಪಿರೇರ, ಕೋಶಾಧಿಕಾರಿಯಾಗಿ ಲ. ಗಾಡ್ಫ್ರೀ ಡಿಸೋಜಾ ಮತ್ತು ವಿವಿಧ ಹುದ್ದೆಗಳಿಗೆ ಕಾರ್ಯಕಾರಿ ಸಮಿತಿಯ ಆಯ್ಕೆಯಾಗಿದ್ದು, ನಾಳೆ ಪ್ರಮಾಣ ವಚನ ಮಾಡಲಿದ್ದಾರೆ. ಕುವೈಟ್ ಏರ್ ವೇಸ್ ನಲ್ಲಿ 25 ವರ್ಷ ಫ್ರೈಟ್ ಸೀನಿಯರ್ ಆಫೀಸರ್ ಆಗಿ ಸೇವೆ ಸಲ್ಲಿಸಿ, ಸೇವಾ ನಿವೃತ್ತಿ ಪಡೆದಿರುವ ಲ. ಜೋನ್ ಫೆರ್ನಾಂಡಿಸ್, ಉದ್ಯಾವರದಲ್ಲಿ ವಾಸವಿದ್ದು, ಪ್ರಸ್ತುತ ಕೃಷಿ ಸಂಘ ಉದ್ಯಾವರದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವಿದ್ಯಾರ್ಥಿ ಜೀವನದಲ್ಲಿ ನಾಯಕತ್ವದ ಗುಣಗಳಿದ್ದ ಇವರು ಸಿ.ವೈ.ಎ. ಇದರ ಮಾಜಿ ಅಧ್ಯಕ್ಷರು. ಉದ್ಯಾವರದ ಸಂತ ಫ್ರಾನ್ಸಿಸ್ ಜೇವಿಯರ್ ನವೀಕೃತ ದೇವಾಲಯದ ಸಂಪನ್ಮೂಲ ಸಮಿತಿಯ ಸಂಯೋಜಕರಾಗಿಯೂ ಸೇವೆ ಸಲ್ಲಿಸಿರುವ ಇವರು, ಹಲವು ವರ್ಷ ಪಾಲನಾ ಮಂಡಳಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. |