ಅಭಿವೃದ್ಧಿ ಗಾಳಿಯಲ್ಲಿ ಹಾರಿ ಹೋಗುತ್ತಿದೆ, ಸಮುದ್ರದಲ್ಲೂ ತೇಲಿ ಹೋಗುತ್ತಿದೆ – ಪ್ರಿಯಾಂಕ್ ಖರ್ಗೆ ವ್ಯಂಗ್ಯ
ಬೆಂಗಳೂರು ಮೇ.10 : ಅಭಿವೃದ್ಧಿ’ ಗಾಳಿಯಲ್ಲಿ ಹಾರಿ ಹೋಗುತ್ತಿದೆ, ಸಮುದ್ರದಲ್ಲೂ ತೇಲಿ ಹೋಗುತ್ತಿದೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ.
ಬೆಂಗಳೂರಿನ ಎಚ್.ಎಸ್.ಆರ್ ಬಡಾವಣೆಯಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದ ಛಾವಣಿ ಕುಸಿದಿರುವ ವಿಚಾರ ಹಾಗೂ ಮಲ್ಪೆ ಬೀಚ್ ನಲ್ಲಿ ತೇಲುವ ಸೇತುವೆ ಮುರಿದಿರುವ ಬಗ್ಗೆ ಟ್ವೀಟ್ ಮೂಲಕ ಸರಕಾರವನ್ನು ಟೀಕಿಸಿರುವ ಅವರು `40% ಬಿಜೆಪಿಯ ಪಾಲು, 60% ಗಾಳಿ, ಸಮುದ್ರದ ಪಾಲು ರಾಜ್ಯದ ಅಭಿವೃದ್ಧಿ ಮಣ್ಣುಪಾಲು ಜನರ ಬದುಕು ಬೀದಿಪಾಲು!, ಬಿಜೆಪಿ ಸರ್ಕಾರ ವಿಧಾನ ಸೌಧವನ್ನು “ವ್ಯಾಪಾರ ಸೌಧ” ಮಾಡಿರುವಾಗ ‘ಅಭಿವೃದ್ಧಿ’ ಎನ್ನುವುದು ಗಾಳಿಯಲ್ಲಿ ಹಾರಿ ಹೋಗುತ್ತಿದೆ, ಸಮುದ್ರದಲ್ಲೂ ತೇಲಿ ಹೋಗುತ್ತಿದೆ’ ಎಂದು ಲೇವಡಿ ಮಾಡಿದ್ದಾರೆ.
ಹಾಗೂ ತಮ್ಮ ಟ್ವೀಟ್ ನಲ್ಲಿ ಈ ಎರಡೂ ಘಟನೆ ಕುರಿತು ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ