ಟಿಕೆಟ್‌ಗಾದರೂ ಸರಿ, ಮಂತ್ರಿಗಿರಿ, ಸಿಎಂ ಹುದ್ದೆಗಾದರೂ ಸರಿ ಬಿಜೆಪಿಯಲ್ಲಿ ‘ಸೂಟ್ ಕೇಸ್’ ಮುಖ್ಯ’- ಕಾಂಗ್ರೆಸ್ ವ್ಯಂಗ್ಯ

ಬೆಂಗಳೂರು ಮೇ.10: ವಾಜಪೇಯಿ ಕ್ರೀಡಾಂಗಣದ ಛಾವಣಿ ಕುಸಿದಿದೆ, ತೇಲು ಸೇತುವೆ ತೇಲಿಹೋಗಿದೆ ಈ ಮೂಲಕ ರಾಜ್ಯ ಸರ್ಕಾರದ 40 ಪರ್ಸೆಂಟ್ ಕಮೀಷನ್ ಭ್ರಷ್ಟಾಚಾರವನ್ನು ನಿಸರ್ಗವೇ ಬಯಲು ಮಾಡುತ್ತಿದೆ ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

ಈ ವಿಚಾರವಾಗಿ ಸರಣಿ ಟ್ವಿಟ್ ಮೂಲಕ ಬಿಜೆಪಿ ವಿರುದ್ಧ ಟೀಕಿಸಿರುವ ಕಾಂಗ್ರೆಸ್, ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾಂಗ್ರೆಸ್ ದೂಷಣೆಯಿಂದ ತಮ್ಮ ಹಗರಣ ಮುಚ್ಚಿಕೊಳ್ಳ ಬಹುದು ಎಂದುಕೊಂಡಿದ್ದಾರೆ. ಆದರೆ, ಬಿಜೆಪಿ ಸರ್ಕಾರದ ಶೇ 40 ಪರ್ಸೆಂಟ್ ಭ್ರಷ್ಟಾಚಾರವನ್ನು ನಿಸರ್ಗವೇ ಬಯಲು ಮಾಡುತ್ತಿದೆ. ವಾಜಪೇಯಿ ಕ್ರೀಡಾಂಗಣದ ಛಾವಣಿ ಕುಸಿದಿದೆ, ತೇಲು ಸೇತುವೆ ತೇಲಿಹೋಗಿದೆ. ಇದು ಶೇ 40 ಪರ್ಸೆಂಟ್ ಪ್ರಭಾವವಲ್ಲದೆ ಇನ್ನೇನು’ ಎಂದು ಪ್ರಶ್ನಿಸಿ ಬರೆದುಕೊಂಡಿದೆ.

ಹಾಗೂ ಮಾರ್ಚ್ 1ರಂದು ಸಿಎಂ ಬೊಮ್ಮಾಯಿಯವರಿಂದ ಸ್ಟೇಡಿಯಂ ಉದ್ಘಾಟನೆ, ಮೇ 9 ರಂದು ಕ್ರೀಡಾಂಗಣ ಕುಸಿದಿದೆ. ಇದು ಶೇ 40 ಪರ್ಸೆಂಟ್ ಕಮೀಷನ್‌ನಿಂದ ಆಗಿರಬಹುದೇ?, ಕರ್ನಾಟಕದಲ್ಲಿ ಬಿಜೆಪಿ ಸರ್ಕಾರದ ವ್ಯಾಪಕವಾದ ಭ್ರಷ್ಟಚಾರವು ಬ್ರಾಂಡ್ ಕರ್ನಾಟಕವನ್ನು ನಾಶಪಡಿಸುತ್ತಿದೆ ಎಂದು ಕಾಂಗ್ರೆಸ್ ಕಿಡಿಕಾರಿದೆ.ಹಾಗೂ ಮೇ 6ರಂದು ಮೊದಲ ತೇಲುವ ಸೇತುವೆ ಅನಾವರಣ, ಮೇ 9ರಂದು ತೇಲುವ ಸೇತುವೆ ತೇಲುತ್ತಿದೆ!, ಬೊಮ್ಮಾಯಿ ಸರ್ಕಾರದ 40 ಪರ್ಸೆಂಟ್ ಕಮಿಷನ್ ಭ್ರಷ್ಟಾಚಾರದ ಅಸಹನೀಯ ದುರ್ವಾಸನೆಯು ‘ಬ್ರಾಂಡ್ ಕರ್ನಾಟಕ’ವನ್ನು ಮಿಲಿಸೆಕೆಂಡ್‌ನಲ್ಲಿ ಕಳಂಕಿತಗೊಳಿಸುತ್ತಿದೆ ಎಂದು ಕಾಂಗ್ರೆಸ್ ಹೇಳಿದೆ.

‘ಮೊನ್ನೆಯಷ್ಟೇ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೊಬ್ಬರು ‘ಟಿಕೆಟ್‌ಗಾಗಿ ಸೀರೆ, ಪಂಚೆ ಹಿಡಿದು ಬರಬೇಡಿ’ ಎಂದು ತಮ್ಮ ಪಕ್ಷದವರಿಗೆ ಹೇಳಿದ್ದರು. ಹಿಡಿದು ಬರಬೇಕಿರುವುದು ‘ಸೂಟ್ ಕೇಸ್’ ಎಂಬುದನ್ನು ಯತ್ನಾಳ್ ಅವರು ತಿಳಿಸಿದ್ದಾರೆ. ಟಿಕೆಟ್‌ಗಾದರೂ ಸರಿ, ಮಂತ್ರಿಗಿರಿ, ಸಿಎಂ ಹುದ್ದೆಗಾದರೂ ಸರಿ ಬಿಜೆಪಿಯಲ್ಲಿ ‘ಸೂಟ್ ಕೇಸ್’ ಮುಖ್ಯ’ ಎಂದು ವ್ಯಂಗ್ಯವಾಡಿದೆ.

Leave a Reply

Your email address will not be published. Required fields are marked *

error: Content is protected !!