ಭೂಮಿ ಪೂಜೆ ನೆನಪಿಗಾಗಿ ಕಲ್ಮಾಡಿಯ ಬಡ ರಿಕ್ಷಾ ಚಾಲಕರೊರ್ವರಿಗೆ ಮನೆ ನಿರ್ಮಾಣ
ಉಡುಪಿ: (ಉಡುಪಿ ಟೈಮ್ಸ್ ವರದಿ) ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಕೆ. ರಾಘವೇಂದ್ರ ಕಿಣಿ ಅವರು ರಾಮ ಜನ್ಮಭೂಮಿಯ, ಭೂಮಿ ಪೂಜೆಯ ನೆನಪಿಗಾಗಿ ಕಲ್ಮಾಡಿಯ ಬಡ ರಿಕ್ಷಾ ಚಾಲಕರೊರ್ವರಿಗೆ ಮನೆ ನಿರ್ಮಿಸಿಕೊಡುವ ಕಾರ್ಯಕ್ಕೆ ಮುಂದಾಗಿದ್ದು, ವ್ಯಾಪಕ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಇಂದಿನ ಈ ಪವಿತ್ರ ದಿನ ಅವಿಸ್ಮರಣೀಯವಾದದ್ದು, ಅದಕ್ಕಾಗಿ ಕಲ್ಮಾಡಿಯ ದಲಿತ ರಿಕ್ಷಾ ಚಾಲಕ ಬಾಬಣ್ಣರಿಗೆ ನೂತನ ಮನೆ ನಿರ್ಮಿಸಿ ಕೊಡುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಬಾಬಣ್ಣ ಹಳೆಯ ಗುಡಿಸಲಿಗೆ ಪ್ಲಾಸ್ಟಿಕ್ ಹೊದಿಕೆ ಹಾಕಿ ವಾಸಿಸುತ್ತಿದ್ದರು. ಇದರ ಮಾಹಿತಿ ಪಡೆದ ರಾಘವೇಂದ್ರ ಕಿಣಿ ಅವರು, ಇವರಿಗೆ 350 ಚದರಡಿಯ ನೂತನ ಮನೆ ನಿರ್ಮಿಸಲು ಶಿಲಾನ್ಯಾಸ ಬುಧವಾರ ನಡೆಸಿದರು.
ಮನೆ ನಿರ್ಮಿಮಾಣಕ್ಕೆ ಕಿಣಿಯವರು ತಮ್ಮ ಪ್ರಾಧಿಕಾರದ ಅಧ್ಯಕ್ಷರಾದ ಮೊದಲಿನ ಸಂಬಳದ ಮೊತ್ತವನ್ನು ದೇಣಿಗೆ ನೀಡಲು ನಿರ್ಧರಿಸಿದ್ದಾರೆ.
ಈ ಮನೆಯ ಸಂಪೂರ್ಣ ವಿದ್ಯುತ್ ಶಕ್ತಿ ಸಂಪರ್ಕವನ್ನು ಆಸರೆ ಚಾರಿಟೇಬಲ್ ಟ್ರಸ್ಟ್‌ನಿಂದ ಮಾಡಲಾಗುವುದು . ಮನೆ ನಿರ್ಮಾಣದ ನೇತೃತ್ವವನ್ನು ಸ್ಥಳೀಯ ನಗರಸಭಾ ಸದಸ್ಯ ಸುಂದರ. ಜೆ. ಕಲ್ಮಾಡಿ ವಹಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಪ್ರಭಾಕರ್ ಕಲ್ಮಾಡಿ, ರಿಕ್ಷಾ ಯೂನಿಯನ್ ಅಧ್ಯಕ್ಷ ಸಾಧು, ಹಿಂದುಳಿದ ಮೋರ್ಚಾದ ನಗರದ ಅಧ್ಯಕ್ಷ ವಿನಯ ಕುಮಾರ್ ಕಲ್ಮಾಡಿ. ಮನೋಜ್ ಕುಮಾರ್ ಕಲ್ಮಾಡಿ. ಕೃಷ್ಣ ಕಲ್ಮಾಡಿ. ಹರೀಶ್ ಕಲ್ಮಾಡಿ.ಸಚಿನ್ ಎಸ್ ವಿ ಕಲ್ಮಾಡಿ. ರಮೇಶ್ ಕಲ್ಮಾಡಿ. ಬೂತ್ ಅಧ್ಯಕ್ಷರಾದ ರಂಜಿತ್ ಪಾಲನ್, ಕಾರ್ಯದರ್ಶಿ ಗಿರೀಶ್ ಕಲ್ಮಾಡಿ, ಮೊಹಮ್ಮದ್ ಪಕೀರ್, ಪ್ರಜೀತ್ ಕಲ್ಮಾಡಿ, ಬಾಲಕೃಷ್ಣ ಕಲ್ಮಾಡಿ, ಲತೀಶ್ ಕಲ್ಮಾಡಿ ಮೊದಲಾದವರು ಉಪಸ್ಥಿತರಿದ್ದರು.