ಮುಂಬೈ: ಗುಂಡಿಕ್ಕಿ ಮಟ್ಕಾ ಕಿಂಗ್ ಹತ್ಯೆ
ಮುಂಬೈ: ಮಟ್ಕಾ ಕಿಂಗ್ ಜಿಗ್ನೇಶ್ ಠಕ್ಕರ್ ಅನ್ನು ನಾಲ್ಕು ಜನ ದುಷ್ಕರ್ಮಿಗಳು ಮುಂಬೈನ ಕಲ್ಯಾಣ್ ನಗರದಲ್ಲಿ ಗುಂಡಿಕ್ಕಿ ಹತ್ಯೆಗೈಲಾಗಿದೆ.
ಜಿಗ್ನೇಶ್ ಕಲ್ಯಾಣ್ ನಗರದ ತನ್ನ ಕಚೇರಿಯಲ್ಲಿ ಕುಳಿತಾಗ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ನಂತರ ಠಕ್ಕರ್ ಅಲಿಯಾಸ್ ಮುನಿಯಾನನ್ನು ಕಲ್ಯಾಣ್ ನ ಫೋರ್ಟಿಸ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಆಸ್ಪತ್ರೆಯಲ್ಲಿ ಜಿಗ್ನೇಶ್ ಮೃತಪಟ್ಟಿರೋದನ್ನು ವೈದ್ಯರು ದೃಢಪಡಿಸಿದ್ದಾರೆ.
ಮಾಹಿತಿ ಪ್ರಕಾರ ಜಿಗ್ನೇಶ್ ವ್ಯವಹಾರದ ವಿಚಾರವಾಗಿ ಡಾನ್ ನನ್ನು ಷಾ ಸಹಚರ ರೌಡಿ ಚೇತನ್ ಪಟೇಲ್ ಜೊತೆ ಗಲಾಟೆ ಮಾಡಿಕೊಂಡಿದ್ದ. ಈ ವಿಚಾರವಾಗಿಯೇ ಆತನನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಇದೇ ವಿಚಾರವಾಗಿ ನನ್ನು ಜೈಪಾಲ್ ತನ್ನಿಬ್ಬರ ಸಹಚರರೊಂದಿಗೆ ಆಗಮಿಸಿ ಗುಂಡಿಕ್ಕಿ ಕೊಂದಿದ್ದಾನೆ.
ಜಿಗ್ನೇಶ್ ಮೇಲೆ ಗುಂಡಿನ ದಾಳಿ ನಡೆದ ಸಮಯದಲ್ಲಿ ಆತನ ಜೊತೆಗಿದ್ದ ಸಹಚರ ಮಾತನಾಡಿ, ಆರೋಪಿಗಳು ನಮ್ಮ ಮುನಿಯನ ಮೇಲೆ ಗುಂಡಿನ ದಾಳಿ ಮಾಡಿ, ನಂತರ ಬಂದು ನನಗೆ ರಿವಾಲ್ವರ್ ತೋರಿಸಿದರು. ಜೊತೆಗೆ ನನ್ನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಹೇಳಿದ್ದಾನೆ.
ಕೊಲೆಯಾದ ಜಿಗ್ನೇಶ್ ಡಾನ್ ಚೋಟಾ ರಾಜನ್ ಜೊತೆ ಒಡನಾಟ ಹೊಂದಿದ್ದ ಎಂದು ವರದಿಯಾಗಿದೆ.ಜಿಗ್ನೇಶ್ ಅಲಿಯಾಸ್ ಮುನಿಯಾ ಮಹಾರಾಷ್ಟ್ರದ ಕಲ್ಯಾಣ್, ಡೊಂಬಿವಲಿ ಮತ್ತು ಉಲ್ಲಾಸ್ ನಗರದಲ್ಲಿ ಮಟ್ಕಾ ವ್ಯವಹಾರ ನಡೆಸುತ್ತಿದ್ದ. ಈ ಕೆಲಸದಲ್ಲಿ ಆತ ನನ್ನು ಷಾ ಅವನೊಂದಿಗೆ ಪೈಪೋಟಿಯನ್ನು ಹೊಂದಿದ್ದ ಎಂದು ಪೊಲೀಸರು ಹೇಳಿದ್ದಾರೆ. ಜೊತೆಗೆ ಧರ್ಮೇಶ್ ಅಲಿಯಾಸ್ ನನ್ನು ಷಾನ ಸಹವರ್ತಿ ಜೈಪಾಲ್ ಅಲಿಯಾಸ್ ಜಪಾನ್ ಮತ್ತು ಇಬ್ಬರು ಅಪರಿಚಿತ ವ್ಯಕ್ತಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.