ಪಾಕಿಸ್ತಾನದಲ್ಲಿ 18 ವರ್ಷದ ಹಿಂದೂ ಯುವತಿಯ ಗುಂಡಿಕ್ಕಿ ಹತ್ಯೆ

ಸಿಂಧ್ ಮಾ. 22: ಪಾಕಿಸ್ತಾನದ ದಕ್ಷಿಣ ಸಿಂಧ್ ಪ್ರಾಂತ್ಯದಲ್ಲಿ 18 ವರ್ಷದ ಹಿಂದೂ ಯುವತಿಯನ್ನು ಅಪಹರಿಸಲು ನಡೆಸಿದ ಯತ್ನ ವಿಫಲವಾದಾಗ ಆಕೆಯನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
‘ಪೂಜಾ ಓಡ್ ‘ ಹತ್ಯೆಗೊಳಗಾದ ಯುವತಿ.

ಪಾಕಿಸ್ತಾನದ ದ.ಸಿಂಧ್ ಪ್ರಾಂತ್ಯದ ರೋಹಿ ಸುಕ್ಕೂರ್‌ ಎಂಬಲ್ಲಿ ‘ಪೂಜಾ ಓಡ್ ‘ಅವರನ್ನು ಅಪಹರಿಸಲು ಯತ್ನಿಸಿದಾಗ ದಾಳಿಕೋರರಿಗೆ ತೀವ್ರ ಪ್ರತಿರೋಧ ತೋರಿದ ಕಾರಣ ಅವರನ್ನು ರಸ್ತೆಯ ಮಧ್ಯದಲ್ಲಿ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ಹಿಂದೂಗಳು ಪಾಕಿಸ್ತಾನದಲ್ಲಿ ಅತಿ ದೊಡ್ಡ ಅಲ್ಪಸಂಖ್ಯಾತ ಸಮುದಾಯ ವಾಗಿದೆ. ಅಧಿಕೃತ ಅಂದಾಜಿನ ಪ್ರಕಾರ ಪಾಕಿಸ್ತಾನದಲ್ಲಿ 75ಲಕ್ಷ ಹಿಂದೂಗಳು ವಾಸಿಸುತ್ತಿದ್ದಾರೆ. ಆದರೆ ಸಮುದಾಯದ ಪ್ರಕಾರ, 90 ಲಕ್ಷಕ್ಕೂ ಹೆಚ್ಚು ಹಿಂದೂಗಳು ದೇಶದಲ್ಲಿ ವಾಸಿಸುತ್ತಿದ್ದಾರೆ. ಪಾಕಿಸ್ತಾನ್ ಬ್ಯೂರೋ ಆಫ್ ಸ್ಟ್ಯಾಟಿಸ್ಟಿಕ್ಸ್ , ಪಾಕಿಸ್ತಾನದಲ್ಲಿ ಹಿಂದೂ ಸಮುದಾಯದ ಒಟ್ಟಾರೆ ಜನಸಂಖ್ಯೆಯನ್ನು 1.60 ಪ್ರತಿಶತ ಮತ್ತು ಸಿಂಧ್‌ನಲ್ಲಿ ಕ್ರಮವಾಗಿ 6.51 ಪ್ರತಿಶತ ಎಂದು ವರದಿ ಮಾಡಿದೆ.

ಇನ್ನು ಪಾಕಿಸ್ತಾನದಲ್ಲಿ ಹಿಂದೂಗಳ ಹತ್ಯೆ ಮುಂದುವರೆದಿದ್ದು,ಪ್ರತಿ ವರ್ಷ, ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ಹಲವಾರು ಮಹಿಳೆಯರನ್ನು, ವಿಶೇಷವಾಗಿ ಸಿಂಧ್‌ನಲ್ಲಿ ಹಿಂದೂಗಳನ್ನು ಧಾರ್ಮಿಕ ಉಗ್ರಗಾಮಿಗಳು ಅಪಹರಿಸಿ ಬಲವಂತವಾಗಿ ಮತಾಂತರಿಸುತ್ತಿದ್ದಾರೆ ಎಂದು ಮಾಧ್ಯಮ ವರದಿಗಳಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!