3ನೇ ಮಹಾಯುದ್ಧ ಪರಮಾಣು ಶಸ್ತ್ರಾಸ್ತ್ರಗಳೊಂದಿಗೆ ನಡೆಯಲಿದೆ: ರಷ್ಯಾ ವಿದೇಶಾಂಗ ಸಚಿವ
ಮಾಸ್ಕೋ: ಮೂರನೇ ಮಹಾಯುದ್ಧ ಸಂಭವಿಸಿದರೆ ಅದು ಪರಮಾಣು ಶಸ್ತ್ರಾಸ್ತ್ರಗಳು ಮತ್ತು ವಿಧ್ವಂಸಕ ಅಸ್ತ್ರಗಳೊಂದಿಗೆ ಎಂದು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಹೇಳಿದ್ದಾರೆ.
ಪ್ರಮುಖ ಸುದ್ದಿವಾಹಿನಿಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ಮತ್ತೊಂದು ಮಹಾಯುದ್ಧವು ಪರಮಾಣು ಯುದ್ಧವಾಗಲಿದೆ ಎಂದು ಹೇಳಿದ್ದಾರೆ. ತಮ್ಮ ಎದುರಾಳಿ ದೇಶವಾದ ಉಕ್ರೇನ್ಗೆ ಪರಮಾಣು ಶಸ್ತ್ರಾಸ್ತ್ರಗಳ ಶೇಖರಣೆಗೆ ಅವಕಾಶ ನೀಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಉಕ್ರೇನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಸ್ವಾಧೀನಪಡಿಸಿಕೊಳ್ಳುವುದನ್ನು ತಡೆಯಲು ವಿಶೇಷ ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದೇವೆ ಎಂದು ಅವರು ವಿವರಿಸಿದ್ದಾರೆ. ಉಕ್ರೇನ್ ಅನ್ನು ನಿಶ್ಯಸ್ತ್ರೀಕರಣ ರಾಜ್ಯವಾಗಿ ಪರಿವರ್ತಿಸುವುದು ಅವರ ಗುರಿಯಾಗಿದೆ. ಉಕ್ರೇನ್ ಮೇಲಿನ ಯುದ್ಧದ ಹಿನ್ನೆಲೆಯಲ್ಲಿ ಪಾಶ್ಚಿಮಾತ್ಯ ದೇಶಗಳ ನಿರ್ಬಂಧಗಳಿಗೆ ಅವರು ಸಿದ್ಧರಾಗಿದ್ದಾರೆ ಎಂದು ಅವರು ಹೇಳಿದರು.
ಉಕ್ರೇನ್ನೊಂದಿಗೆ 2 ಸುತ್ತಿನ ಮಾತುಕತೆಗೆ ರಷ್ಯಾ ಸಿದ್ಧವಾಗಿದೆ ಎಂದು ಲಾವ್ರೊವ್ ಒತ್ತಿ ಹೇಳಿದರು. ಅಮೆರಿಕದ ನಿರ್ದೇಶನದಿಂದಾಗಿ ಉಕ್ರೇನ್ ಮಾತುಕತೆಯನ್ನು ಮುಂದೂಡುತ್ತಿದೆ ಎಂದು ಆರೋಪಿಸದ್ದಾರೆ. ಮತ್ತೊಂದೆಡೆ, ಉಭಯ ದೇಶಗಳ ನಡುವಿನ ಪ್ರತಿದಾಳಿಯಲ್ಲಿ ಹೆಚ್ಚಿನ ಸಂಖ್ಯೆಯ ರಷ್ಯಾದ ಸೈನಿಕರು, ಉಕ್ರೇನ್ ಪರ ಸೈನಿಕರು ಹಾಗೂ ನಾಗರಿಕರು ಸಾವನ್ನಪ್ಪುತ್ತಿದ್ದಾರೆ. ಪ್ರಮುಖ ನಗರಗಳನ್ನ ಕೇಂದ್ರೀಕರಿಸಿದ ರಷ್ಯಾದ ಪಡೆಗಳು ಖಾರ್ಕಿವ್ ಅನ್ನು ಸಂಪೂರ್ಣವಾಗಿ ವಶಪಡಿಸಿಕೊಂಡಿದೆ.
ಇನ್ನೊಂದೆಡೆ ಯುದ್ಧದಿಂದಾಗಿ ಏಳು ಲಕ್ಷ ಜನ ದೇಶವನ್ನ ಬಿಟ್ಟು ಗುಳೆ ಹೋರಟಿದ್ದಾರೆ, ಅವರಿಗೆ ಆಶ್ರಯ ನೀಡಲು ಹಲವು ದೇಶಗಳು ಹಿಂದೇಟು ಹಾಕುತ್ತಿವೆ ಎಂದಿದ್ದಾರೆ