ಆಪರೇಷನ್ ಗಂಗಾ- ಇಂದು 19 ವಿಮಾನಗಳಲ್ಲಿ 3,726 ಭಾರತೀಯರು ಸ್ವದೇಶಕ್ಕೆ ವಾಪಸ್

ನವದೆಹಲಿ: ಆಪರೇಷನ್ ಗಂಗಾ ಸ್ಥಳಾಂತರ ಕಾರ್ಯಕ್ರಮದಡಿ ಇಂದು 19 ವಿಮಾನಗಳಲ್ಲಿ  3,726 ಭಾರತೀಯರು ಸ್ವದೇಶಕ್ಕೆ ವಾಪಸ್ ಆಗಲಿದ್ದಾರೆ ಎಂದು ನಾಗರಿಕ ವಿಮಾನಯಾನ ಸಚಿವ ಜೋತಿರಾಧಿತ್ಯ ಸಿಂಧಿಯಾ ಹೇಳಿದ್ದಾರೆ

ಆಪರೇಷನ್ ಗಂಗಾದಡಿ ಭಾರತೀಯ ವಾಯುಪಡೆಯ 8 ವಿಮಾನಗಳು, ಏರ್ ಇಂಡಿಯಾ ಮತ್ತು ಇಂಡಿಗೋ ರೊಮಾನಿಯಾದ ರಾಜಧಾನಿ ಬುಚಾರೆಸ್ಟ್ ನಿಂದ ಆಗಮಿಸುತ್ತಿರುವುದಾಗಿ ಅವರು ಟ್ವೀಟ್ ಮಾಡಿದ್ದಾರೆ.

ಎರಡು ಇಂಡಿಯೋ ವಿಮಾನಗಳು ರೊಮಾನಿಯಾದ ನಗರ ಸುಸೇವಾದಿಂದ ಬರಲಿದೆ. ಒಂದು ಸ್ಪೈಸ್ ಜೆಟ್ ವಿಮಾನ ಸ್ಲೊವಾಕಿಯಾದ ಕೋಸಿಸ್, ಬುಡಾಪೆಸ್ಟ್ ನಿಂದ ಐದು ಮತ್ತು ರ್ಜೆಸ್ಜೋವ್ ದಿಂದ ಮೂರು ವಿಮಾನಗಳು ಬರಲಿವೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ. ಮುಂದಿನ 24 ಗಂಟೆಗಳಲ್ಲಿ ನೆರೆಯ ಉಕ್ರೇನ್ ರಾಷ್ಚ್ರದಿಂದ 15 ವಿಮಾನಗಳಲ್ಲಿ ಭಾರತೀಯರನ್ನು ಸ್ವದೇಶಕ್ಕೆ ಕರೆ ತರಲಾಗುವುದು ಎಂದು ಸರ್ಕಾರ ಬುಧವಾರ ಹೇಳಿತ್ತು.

Leave a Reply

Your email address will not be published. Required fields are marked *

error: Content is protected !!