ಇಂದು ರಷ್ಯಾ-ಉಕ್ರೇನ್ ಸಂಧಾನ ಮಾತುಕತೆ
ಕೈವ್: ರಷ್ಯಾದೊಂದಿಗೆ ಮಾತುಕತೆಗೆ ತೆರಳಿರುವ ಉಕ್ರೇನಿಯನ್ ನಿಯೋಗ ಈಗಾಗಲೇ ಬೆಲಾರಸ್ ತಲುಪಿದ್ದು ಮಧ್ಯಾಹ್ನನ 3.30ಕ್ಕೆ ಸಂಧಾನ ಮಾತುಕತೆ ನಡೆಸಲಿದೆ.
ಬೆಲಾರಸ್ನಲ್ಲಿ ರಷ್ಯಾ ಮತ್ತು ಉಕ್ರೇನ್ ನಡುವಿನ ಮಾತುಕತೆಗೆ ವೇದಿಕೆಯನ್ನು ಸಿದ್ಧಪಡಿಸಲಾಗಿದೆ. ಉಕ್ರೇನ್ ನಲ್ಲಿ ರಷ್ಯಾ ಸೇನೆ ದಾಳಿಯ ತೀವ್ರತೆಯನ್ನು ಕಡಿಮೆ ಮಾಡಿದ್ದು ಉಕ್ರೇನ್ ನಿಂದ ತೆರಳಲು ಸಾರ್ವಜನಿಕರಿಗೆ ರಷ್ಯಾ ಸೇನೆ ಮುಕ್ತ ಅವಕಾಶ ನೀಡಿದೆ ಎಂದು ವರದಿಯಾಗಿದೆ. ಉಕ್ರೇನ್ ಅನ್ನು ಸಶಸ್ತ್ರೀಕರಣಗೊಳಿಸುವ ಮಿಲಿಟರಿ ಕಾರ್ಯಾಚರಣೆಯಲ್ಲಿ ತನ್ನ ಸಶಸ್ತ್ರ ಪಡೆಗಳ ಭಾಗವಹಿಸುವಿಕೆಯ ಬಗ್ಗೆ ಅಂತರ್ಜಾಲದಲ್ಲಿ ಮಾಡಿದ ಆರೋಪವನ್ನು ಬೆಲಾರಸ್ ಸರ್ಕಾರ ತಿರಸ್ಕರಿಸಿದೆ.