ಯುದ್ಧ ವಿಚಾರವಾಗಿ ನಾವು ಉಕ್ರೇನ್ ಜೊತೆ ಮಾತುಕತೆಗೆ ಸಿದ್ಧರಾಗಿದ್ದೇವೆ- ರಷ್ಯಾ ವಿದೇಶಾಂಗ ಸಚಿವ

ವಾಷಿಂಗ್ಟನ್ ಫೆ.25: ಉಕ್ರೇನ್ ಮತ್ತು ರಷ್ಯಾ ನಡುವೆ ಯುದ್ಧ ವಿಚಾರವಾಗಿ ನಾವು ಉಕ್ರೇನ್ ಜೊತೆ ಮಾತುಕತೆಗೆ ಸಿದ್ಧರಾಗಿದ್ದೇವೆ ಎಂದು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ತಿಳಿಸಿದ್ದಾರೆ.

ಈ ವಿಚಾರವಾಗಿ ಮಾಹಿತಿ ನೀಡಿರುವ ಅವರು, ಉಕ್ರೇನ್ ಸೇನೆಯು ದಾಳಿಯನ್ನು ನಿಲ್ಲಿಸಿದ ನಂತರ, ನಾವು ಅವರ ಜೊತೆ ಮಾತುಕತೆಗೆ ಸಿದ್ಧರಿದ್ದೇವೆ. ಪುಟಿನ್ ಅವರು ಸಶಸ್ತ್ರೀಕರಣದ ಕುರಿತು ಮಾತುಕತೆ ನಡೆಸಲು ಸಿದ್ಧರಾಗಿದ್ದಾರೆ ಎಂದು ತಿಳಿಸಿದ್ದಾರೆ.

ಉಕ್ರೇನ್ ಮತ್ತು ರಷ್ಯಾ ನಡುವೆ ಯುದ್ಧ ಹಿನ್ನೆಲೆ, ಖಾರ್ಕಿವ್ ಸಿಟಿಯಲ್ಲಿ ಮತ್ತೆ ಬಾಂಬ್ ಬ್ಲಾಸ್ಟ್ ಆರಂಭವಾಗಿದೆ. ಈ ಹಿನ್ನೆಲೆ ಸೈರನ್ ಹಾಕಿ ಜನರನ್ನ ಅಂಡರ್ ಗ್ರೌಂಡ್ ಹೋಗುವಂತೆ ಮಾಹಿತಿ ನೀಡಲಾಗಿದೆ. ಹೀಗಾಗಿ ಜನರು ಸೈರನ್ ಸೌಂಡ್ ಕೇಳಿ ಮತ್ತೆ ಅಂಡರ್ ಗ್ರೌಂಡ್ ಗೆ ವಾಪಸ್ ಆಗಿದ್ದಾರೆ.
ಉಕ್ರೇನ್ ನ ಕೈವ್ ಭಾಗದಲ್ಲಿ ರಷ್ಯಾ ದಾಳಿ ಮುಂದುವರಿದಿದ್ದು,  40 ನಿಮಿಷ ಅಂತರದಲ್ಲಿ ಮೂರು ಡಜನ್ಗೂ ಅಧಿಕ ಕ್ಷಿಪಣಿಗಳನ್ನು ಹಾರಿಸಲಾಗಿದೆ.  ಕೈವ್‍ನಲ್ಲಿ ಅತಿ ಹೆಚ್ಚಿನ ದಾಳಿ ನಡೆದಿದೆ ಎಂದು ಯುಎಸ್ ಸೆನೆಟರ್ ರೂಬಿಯೊರಿಂದ ಮಾಹಿತಿ ಲಭ್ಯವಾಗಿದೆ.

Leave a Reply

Your email address will not be published. Required fields are marked *

error: Content is protected !!