ಲಾಲಾಜಿ ಸಹಿತ ನಾಲ್ವರ ನಿಗಮ ಮಂಡಳಿ ಅಧ್ಯಕ್ಷರ ನೇಮಕ ಹಿಂಪಡೆದ ಸಿಎಂ

ಬೆಂಗಳೂರು (ಉಡುಪಿ ಟೈಮ್ಸ್ ವರದಿ ): ಕರ್ನಾಟಕ ಸರ್ಕಾರ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಘೋಷಿಸಿದ ಕೆಲವೇ ಗಂಟೆಗಳಲ್ಲಿ ನಾಲ್ವರ ನೇಮಕಾತಿ ಆದೇಶ ಹಿಂಪಡೆದ ಮುಖ್ಯಮಂತ್ರಿ . ಇಂದು ಲಾಲಾಜಿ ಸಹಿತ ನಾಲ್ವರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಘೋಷಿಸಿದ್ದು ಆದರೆ ಕೆಲವೇ ಗಂಟೆಗಳ ರಾಜಕೀಯ ಬೆಳವಣಿಗೆಯಾಗಿ ನೇಮಕವನ್ನ ಹಿಂಪಡೆಯಲು ಮುಖ್ಯಮಂತ್ರಿ ಸೂಚಿಸಿದ್ದಾರೆ.

ಕಾಪು ಶಾಸಕರಾದ ಲಾಲಾಜಿ ಮೆಂಡನ್ ರಿಗೆ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. ದೇವರಾಜ ಅರಸ್ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ನೇಮಕಗೊಂಡಿದ್ದ ಜಿ.ಎಚ್.ತಿಪ್ಪಾರೆಡ್ಡಿ, ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ಅಧ್ಯಕ್ಷರಾಗಿ ನೇಮಕಗೊಂಡಿದ್ದ ಪರಣ್ಣ ಈಶ್ವರಪ್ಪ ಮುನವಳ್ಳಿ, ಮತ್ತು ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷರಾಗಿ ನೇಮಕಗೊಂಡಿದ್ದ ಬಸವರಾಜ್ ದಢೇಸೂರ್ ಅವರ ನೇಮಕವನ್ನು ಮುಖ್ಯಮಂತ್ರಿ ಹಿಂಪಡೆದಿದ್ದಾರೆ.

ರಾಜ್ಯದ ವಿವಿಧ ನಿಗಮ ಮಂಡಳಿಗಳಿಗೆ 24 ಶಾಸಕರುಗಳನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಸೋಮವಾರ ಆದೇಶ ಹೊರಡಿಸಿತ್ತು, ಆದರೆ ಆದೇಶ ಹೊರಡಿಸಿದ ಕೆಲವೇ ಗಂಟೆಗಳಲ್ಲಿ ವಾಪಸು ತೆಗದುಕೊಂಡಿದೆ.

ಈ ಬೆಳವಣಿಗೆಗೆ ನಿಖರವಾದ ಕಾರಣ ಇನ್ನು ತಿಳಿದು ಬಂದಿಲ್ಲ. ನೇಮಕದ ಆದೇಶದಿಂದ ಹರುಷಗೊಂಡಿದ್ದ ಲಾಲಾಜಿಯ ಅಭಿಮಾನಿಗಳಿಗೆ ಇದೀಗ ದಿಗ್ಬ್ರಮೆಯಾಗಿದೆ. ಸರಳ ಸಜ್ಜನಿಕೆಯ ಹಾಗು ಯಾವುದೇ ಅಧಿಕಾರದ ಲಾಬಿ ಮಾಡದ ರಾಜಕಾರಣಿ ಎಂದೇ ಖ್ಯಾತರಾದ ಲಾಲಾಜಿಗೆ ಈ ರೀತಿ ಅವಮಾನ ಆಗಿರುವುದು ಪಕ್ಷದ ಕಾರ್ಯಕರ್ತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!