ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ಥಬ್ದ ಚಿತ್ರ ಜಾಥಾಕ್ಕೆ ದಸಂಸ ಬೆಂಬಲ-ಸುಂದರ್ ಮಾಸ್ತರ್

ಉಡುಪಿ ಜ.25 (ಉಡುಪಿ ಟೈಮ್ಸ್ ವರದಿ): ಗಣರಾಜ್ಯೋತ್ಸವದ ಪರೇಡ್ ನಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧ ಚಿತ್ರವನ್ನು ನಿರಾಕರಿಸಿರುವುದನ್ನು ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್‌ವಾದ ಖಂಡಿಸಿದೆ.

ಈ ಬಗ್ಗೆ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್‌ ವಾದ ಪ್ರಕಟಣೆ ಹೊರಡಿಸಿದ್ದು, ದೇಶದ ಶೋಷಿತ ಜನರ ಸಮಾನತೆಗಾಗಿ ತಮ್ಮ ಜೀವನವನ್ನೇ ಸಮರ್ಪಿಸಿದ ವಿಶ್ವಜ್ಞಾನಿಯಾದ ದಾರ್ಶನಿಕ ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ಅವಮಾನ ಮಾಡಿದ ಕೇಂದ್ರ ಸರಕಾರದ ನಡೆಯನ್ನು ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್‌ವಾದ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸುತ್ತದೆ.‌
 
ಜನವರಿ 26 ರಂದು ದೆಹಲಿಯಲ್ಲಿ ನಡೆಯುವ ಗಣರಾಜೋತ್ಸವ ಪೇರೇಡ್‌ನಲ್ಲಿ ನಾರಾಯಣ ಗುರುಗಳ ಸ್ಥಬ್ದ ಚಿತ್ರಕ್ಕೆ ಅವಕಾಶ ನೀಡದೆ ತಿರಸ್ಕಾರ ಮಾಡಿ ಗುರುಗಳಿಗೆ ಕೇಂದ್ರ ಸರಕಾರ ಅವಮಾನ ಮಾಡಿರುವುದನ್ನು ದಸಂಸ ಅಂಬೇಡ್ಕರ್‌ ವಾದ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ್ ಮಾಸ್ತರ್, ಜಿಲ್ಲಾ ಸಂಘಟನಾ ಸಂಚಾಲಕರಾದ ಶ್ಯಾಮ್ ರಾಜ್ ಬಿರ್ತಿ, ಪರಮೇಶ್ವರ ಉಪ್ಪೂರು, ಬಾಸ್ಕರ ಮಾಸ್ತರ್, ಅಣ್ಣಪ್ಪ ಕಾರ್ಕಳ, ಶ್ರೀಧರ ಕುಂಜಿಬೆಟ್ಟು, ಗೋಪಾಲಕೃಷ್ಣ ಕುಂದಾಪುರ, ಶ್ಯಾಮಸುಂದರ್ ತೆಕ್ಕಟ್ಟೆ, ಮಂಜುನಾಥ ಬಾಳ್ಕುದ್ರು, ತಾಲೂಕು ಸಂಚಾಲಕರಾದ ಶಂಕರ್ ದಾಸ್, ಉಡುಪಿ, ರಾಘವ ಕಾರ್ಕಳ, ದೇವು ಹೆಬ್ರಿ, ವಿಠಲ ಕಾಪು, ಶ್ರೀನಿವಾಸ ವಡ್ಡರ್ಸೆ ಬ್ರಹ್ಮಾವರ, ನಾಗರಾಜ ಕುಂದಾಪುರ, ರಾಘವೇಂದ್ರ ಬೆಳ್ಳೆ, ರಾಜೇಂದ್ರನಾಥ್, ದಲಿತ ವಿದ್ಯಾರ್ಥಿ ಒಕ್ಕೂಟದ ರಾಜ್ಯ ಸಂಚಾಲಕ ಎಸ್. ಪ್ರಸಾದ್ ತೀವ್ರವಾಗಿ ಖಂಡಿಸಿದ್ದಾರೆ.
ಹಾಗೂ ಜ.26 ರಂದು ಜರುಗುವ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ಥಬ್ದ ಚಿತ್ರ ಜಾಥಾಕ್ಕೆ  ಸಂಘವು ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!