ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳಲು ಹಾಸ್ಟೆಲ್ ವಾರ್ಡನ್ ಒತ್ತಾಯ: ವಿದ್ಯಾರ್ಥಿನಿ ಆತ್ಮಹತ್ಯೆ
ತಂಜಾವೂರು: ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಾಯಿಸುತ್ತಿದ್ದ ಹಾಸ್ಟೆಲ್ ವಾರ್ಡನ್ ಕಿರುಕುಳಕ್ಕೆ ಮನನೊಂದು ಅಪ್ರಾಪ್ತೆಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನ ತಂಜಾವೂರಿನಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಯುವತಿಯೇ ಲಾವಣ್ಯ. ಈಕೆ 12ನೇ ತರಗತಿ ವಿದ್ಯಾರ್ಥಿನಿ. ವಾರ್ಡನ್ ಸಕಾಯಮರಿ (62) ತಂಜಾವೂರಿನ ಸೇಂಟ್ ಮೈಕಲ್ಸ್ ಗರ್ಲ್ಸ್ ಹೋಮ್ ಎಂಬ ವಸತಿಗೃಹದ ವಾರ್ಡನ್. ಸೇಂಟ್ ಮೈಕಲ್ಸ್ ಗರ್ಲ್ಸ್ ಹೋಮ್ ಹಾಸ್ಟೆಲ್ ಲಾವಣ್ಯಳಿಗೆ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಲು ನಿರಂತರವಾಗಿ ಒತ್ತಾಯಿಸುತ್ತಿದ್ದರು. ಹಾಸ್ಟೆಲ್ ನ ಎಲ್ಲಾ ಕೊಠಡಿಗಳನ್ನು ಸ್ವಚ್ಛ ಗೊಳಿಸುವಂತೆ ನಿರಂತರವಾಗಿ ನಿಂದಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಈ ಘಟನೆಗಳಿಂದ ವಿಚಲಿತಳಾದ ಲಾವಣ್ಯ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಜನವರಿ 9 ರಂದು ವಾಂತಿ ಮಾಡಿ ಕೊಂಡು ತೀವ್ರ ಹೊಟ್ಟೆನೋವು ಕಾಣಿಸಿಕೊಂಡಿದ್ದರಿಂದ ಮಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅರಿಯಲೂರು ಮೂಲದ ಲಾವಣ್ಯ ತಂದೆ ಮುರುಗಾನಂದಂ ಅವರಿಗೆ ಜನವರಿ 10 ರಂದು ಮಾಹಿತಿ ನೀಡಲಾಯಿತು.
ಮುರುಗಾನಂದಂ ಮಗಳು ಲಾವಣ್ಯ ಅವರನ್ನು ತಂಜೂರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ವರ್ಗಾಯಿಸಿದರು. ಆಕೆಗೆ ಪ್ರಜ್ಞೆ ಬಂದಾಗ, ವೈದ್ಯರಿಗೆ ತಿಳಿಸಿದಳು. ಈ ಹಿನ್ನೆಲೆ ವೈದ್ಯರು ತಿರುಕಟ್ಟುಪಲ್ಲಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಲಾವಣ್ಯಳನ್ನು ವಿಚಾರಿಸಿದ್ದರು. ವಿಚಾರಣೆ ಆಧಾರದ ಮೇಲೆ ಬೋರ್ಡಿಂಗ್ ಸ್ಕೂಲ್ ವಾರ್ಡನ್ ಲಾವಣ್ಯಗೆ ಕಿರುಕುಳ ನೀಡಿದ್ದಾರೆ ಮತ್ತು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಾಯಿಸಿದ್ದಾರೆ ಎಂದು ತಿಳಿಯಿತು. ದೂರಿನ ಆಧಾರದ ಮೇಲೆ ಪೊಲೀಸರು ವಾರ್ಡನ್ ಅನ್ನು ಬಂಧಿಸಿದ್ದಾರೆ