ಶೇ.20ರವರೆಗೆ ಮದ್ಯದ ದರ ಇಳಿಕೆ ಮಾಡಲು ಸರಕಾರ ನಿರ್ಧಾರ

ಭೋಪಾಲ್ ಜ.19: ನೂತನ ಅಬಕಾರಿ ನೀತಿ 2022–23ಕ್ಕೆ ಮಧ್ಯ ಪ್ರದೇಶ ಸರಕಾರ ಅನುಮೋದನೆ ನೀಡಿದ ಬೆನ್ನಲ್ಲೇ, ಮದ್ಯದ ದರದಲ್ಲಿ ಇಳಿಕೆ ಮಾಡಲು ನಿರ್ಧರಿಸಿದೆ.

ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಮದ್ಯ ದರದಲ್ಲಿ ಶೇ. 20ರವರೆಗೆ ಇಳಿಕೆ ಮಾಡಲು ನಿರ್ಣಯ ಕೈಗೊಳ್ಳಲಾಗಿದೆ. 

ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಮದ್ಯ ಮಾರಾಟ ಮಳಿಗೆ ಮತ್ತು ನಾಲ್ಕು ದೊಡ್ಡ ನಗರಗಳ ಆಯ್ದ ಸೂಪರ್‌ ಮಾರ್ಕೆಟ್‌ಗಳಲ್ಲಿ ಮದ್ಯ ಮಳಿಗೆ ತೆರೆಯಲು ಅನುಮತಿಯ ಜತೆಗೆ ಮನೆಯಲ್ಲಿಯೇ ಮಿನಿ ಬಾರ್ ಹೊಂದಲು ಅಲ್ಲಿನ ಸರ್ಕಾರ ಅವಕಾಶ ಕಲ್ಪಿಸಿದೆ. ಅದರಂತೆ ಇಂದೋರ್, ಭೋಪಾಲ್, ಜಬಲ್ಪುರ್ ಮತ್ತು ಗ್ವಾಲಿಯರ್‌ನ ಕೆಲವು ಸೂಪರ್‌ ಮಾರ್ಕೆಟ್‌ಗಳಲ್ಲಿಯೂ ಮದ್ಯ ಮಾರಾಟ ತೆರೆಯಲು ಸರ್ಕಾರ ಅನುಮತಿ ನೀಡಲಿದೆ. ಹಾಗೂ ವಾರ್ಷಿಕ ರೂ.1 ಕೋಟಿ ಮತ್ತು ಅದಕ್ಕಿಂತ ಹೆಚ್ಚಿನ ಆದಾಯ ಹೊಂದಿರುವವರು, ವರ್ಷಕ್ಕೆ ರೂ. 50,000 ಶುಲ್ಕ ಪಾವತಿಸಿ ಮನೆಯಲ್ಲಿಯೇ ಬಾರ್ ಹೊಂದಲು ಲೈಸನ್ಸ್ ದೊರೆಯಲಿದೆ ಎಂದು ತಿಳಿದು ಬಂದಿದೆ. 

Leave a Reply

Your email address will not be published. Required fields are marked *

error: Content is protected !!