ಓಮೈಕ್ರಾನ್ಗಾಗಿ ಲಾಕ್ಡೌನ್ ಮತ್ತು ಯುಪಿಯಲ್ಲಿ ರಾಷ್ಟ್ರಪತಿ ಆಳ್ವಿಕೆಯೂ ಆಗಬಹುದು- ಸುಬ್ರಮಣಿಯನ್ ಸ್ವಾಮಿ
ನವದೆಹಲಿ ಡಿ.23: ಓಮೈಕ್ರಾನ್ಗಾಗಿ ಲಾಕ್ಡೌನ್ ಆಗಬಹುದು ಮತ್ತು ಉತ್ತರ ಪ್ರದೇಶದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಿ ಚುನಾವಣೆಯನ್ನು ಸೆಪ್ಟೆಂಬರ್ಗೆ ಮುಂದೂಡಿದರೂ ಆಶ್ಚರ್ಯಪಡಬೇಕಿಲ್ಲ ಎಂದು ರಾಜ್ಯಸಭೆಯ ಬಿಜೆಪಿ ಸದಸ್ಯ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.
ಸದಾ ಟ್ವೀಟ್ ಮೂಲ ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ತೀಕ್ಷ್ಣ ದಾಳಿ ನಡೆಸುವ ಅವರು ಇದೀಗ ಮತ್ತೆ ಟ್ವೀಟ್ ಮೂಲಕ ಈ ರೀತಿ ಹೇಳಿದ್ದಾರೆ. ‘ಓಮೈಕ್ರಾನ್ ಗಾಗಿ ಲಾಕ್ಡೌನ್ ಆಗಬಹುದು ಮತ್ತು ಉತ್ತರ ಪ್ರದೇಶದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಿ ಚುನಾವಣೆಯನ್ನು ಸೆಪ್ಟೆಂಬರ್ಗೆ ಮುಂದೂಡಿದರೂ ಆಶ್ಚರ್ಯಪಡಬೇಕಿಲ್ಲ. ಈ ವರ್ಷದ ಆರಂಭದಲ್ಲಿ ನೇರವಾಗಿ ಮಾಡಲಾಗದ್ದನ್ನು, ಮುಂದಿನ ವರ್ಷದ ಆರಂಭದಲ್ಲಿ ಪರೋಕ್ಷವಾಗಿ ಮಾಡಬಹುದು,’ ಎಂದು ಅವರು ಬರೆದುಕೊಂಡಿದ್ದಾರೆ.
ಇನ್ನು ಇವರ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಟ್ವಿಟರ್ ಬಳೆದಾರರೊಬ್ಬರು ‘ ಮೋದಿಯವರು ಯೋಗಿ ಆದಿತ್ಯನಾಥರನ್ನು ವಜಾ ಮಾಡಲು ಬಯಸಿದ್ದರು. ಆದರೆ ಅದನ್ನು ನೇರವಾಗಿ ಮಾಡಲು ಸಾಧ್ಯವಿಲ್ಲ. ಹಾಗಾಗಿ ರಾಷ್ಟ್ರಪತಿ ಆಡಳಿತವನ್ನು ಜಾರಿ ಮಾಡಿ ಯೋಗಿವರನ್ನು ಪಕ್ಕಕ್ಕೆ ಸರಿಸಲಿದ್ದಾರೆ. ಇದನ್ನೇ ಸುಬ್ರಮಣಿಯನ್ ಸ್ವಾಮಿ ಅವರು ತಮ್ಮ ಪೋಸ್ಟ್ನಲ್ಲಿ ಹೇಳಲು ಪ್ರಯತ್ನಿಸುತ್ತಿದ್ದಾರೆ,’ ಎಂದಿದ್ದಾರೆ. ಒಂದು ವೇಳೆ ಚುನಾವಣೆ ಮುಂದೂಡಲ್ಪಟ್ಟರೆ, 2024ರ ಲೋಕಸಭೆ ಚುನಾವಣೆಯಲ್ಲಿ ಏನಾಗಬಹುದು ಎಂದು ಮತ್ತೊಬ್ಬ ಟ್ವಿಟರ್ ಬಳಕೆದಾರರು ಸ್ವಾಮಿ ಅವರನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸ್ವಾಮಿ, ‘ಏನೂ ಇಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ತಾವೇ ರೂಪಿಸಿದ 75ರ ವಯಸ್ಸಿನ ಮಿತಿಯನ್ನು ತಲುಪಲಿದ್ದಾರೆ,’ ಎಂದು ವ್ಯಂಗ್ಯವಾಡಿದ್ದಾರೆ.