Kodavas ಬದಲು‘Codavas’ಬಳಸಿ- ಹೈಕೋರ್ಟ್ ಸೂಚನೆ

ಹುಬ್ಬಳ್ಳಿ: ಎಲ್ಲಾ ಸರ್ಕಾರಿ ಅಧಿಸೂಚನೆಗಳಲ್ಲಿ ಕೊಡವ ಸಮುದಾಯವನ್ನು ಉಲ್ಲೇಖಿಸುವಾಗ ಕೊಡಗರು ಎಂದು ಬಳಸುವಾಗ ‘Kodavas’ ಅನ್ನು ‘‘Codavas’ ಎಂದು ಬಳಸುವುದನ್ನು ಸರಿಪಡಿಸುವಂತೆ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶ ನೀಡಿದೆ.

Codavas ಪದ ಬಳಕೆ ಸರಿಪಡಿಸುವಂತೆ ಕೋರಿ ಕೊಡವ ನ್ಯಾಷನಲ್ ಕೌನ್ಸಿಲ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಈ ಆದೇಶ ನೀಡಿದೆ. 2009 ರಲ್ಲಿ, ಕೊಡವ ನ್ಯಾಷನಲ್ ಕೌನ್ಸಿಲ್ ಸರ್ಕಾರದ ಅಧಿಸೂಚನೆಗಳಲ್ಲಿ ‘Kodagaru’ ಎಂಬ ಪದವನ್ನು ‘Codavas’ ಎಂದು ಸರಿಪಡಿಸುವಂತೆ ಕರ್ನಾಟಕ ಖಾಯಂ ಹಿಂದುಳಿದ ವರ್ಗಗಳ ಆಯೋಗಕ್ಕೆ ಮನವಿ ಮಾಡಿತ್ತು. ಆಯೋಗವು ರಾಜ್ಯಕ್ಕೆ ಮನವಿಯನ್ನು ರವಾನಿಸಿದ್ದರೂ ಅದು ಸರ್ಕಾರದ ಗಮನಕ್ಕೆ ಬಂದಿರಲಿಲ್ಲ. 

ನಂತರ, ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್‌ಯು ನಾಚಪ್ಪ ಅವರು ಪದ ಬಳಕೆಯನ್ನು ಸರಿಪಡಿಸುವಂತೆ ಕೋರಿ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಸುಮಾರು ಒಂದು ದಶಕದ ನಂತರ, ಕೊಡವ ನ್ಯಾಷನಲ್ ಕೌನ್ಸಿಲ್ ಪರವಾಗಿ ನ್ಯಾಯಾಲಯ ಆದೇಶ ನೀಡಿದೆ.

Leave a Reply

Your email address will not be published. Required fields are marked *

error: Content is protected !!