ಬಹುಕೋಟಿ ಅಕ್ರಮ ಆಸ್ತಿ ಪತ್ತೆ-ನಿರ್ಮಿತಿ ಕೇಂದ್ರದ ಮಾಜಿ ಯೋಜನಾ ನಿರ್ದೇಶಕ ಬಂಧನ

ಬೆಂಗಳೂರು, ನ. 28: ಬಹುಕೋಟಿ ಅಕ್ರಮ ಆಸ್ತಿ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಿರ್ಮಿತಿ ಕೇಂದ್ರದ ಮಾಜಿ ಯೋಜನಾ ನಿರ್ದೇಶಕ ಆರ್.ಎನ್.ವಾಸುದೇವ್ ಅವರನ್ನು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಬಂಧಿಸಿದ್ದಾರೆ.

ವಾಸುದೇವ್  ಪತ್ನಿ, ಮಕ್ಕಳು ಹಾಗೂ ತನ್ನ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ಮೊತ್ತದ ಆಸ್ತಿ ಮಾಡಿದ್ದು, ಬೇನಾಮಿಯಲ್ಲಿ ವ್ಯವಹಾರ ಮಾಡಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಪ್ರಕರಣಕ್ಕೆ ಸಂಬಂಧಿಸಿ ನಾಳೆ ಕುಟುಂಬಸ್ಥರ ವಿಚಾರಣೆ ಹಾಗೂ ದಾಖಲೆಗಳ ಪರಿಶೀಲನೆ ನಡೆಯಲು ಎಸಿಬಿ ಅಧಿಕಾರಿಗಳು ಮುಂದಾಗಿದ್ದಾರೆ.ಇತ್ತೀಚಿಗೆ ನಡೆದ ಎಸಿಬಿ ದಾಳಿ ಸಂದರ್ಭದಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಅಕ್ರಮ ಆಸ್ತಿ ಪತ್ತೆಯಾಗಿದ್ದರೂ ಕೂಡ ವಾಸುದೇವ್ ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸಿರಲಿಲ್ಲ. ಹೀಗಾಗಿ, ತನಿಖೆಗೆ ಸಹಕಾರ ನೀಡದ ಹಿನ್ನಲೆ ಹಾಗೂ ಭ್ರಷ್ಟಾಚಾರ ಆರೋಪದಡಿ ಬಂಧಿಸಿ ನಗರದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.

ಇತ್ತೀಚೆಗೆ 15 ಮಂದಿ ಸರ್ಕಾರಿ ಅಧಿಕಾರಿಗಳ ಮನೆ ಮೇಲೆ ನಡೆದ ದಾಳಿ ಸಂಬಂಧ ಎಸಿಬಿ ಅಧಿಕಾರಿಗಳು ತನಿಖೆ ಚುರುಕು ಗೊಳಿಸಿದ್ದಾರೆ. ಈ ಮಧ್ಯೆ ಎಲ್ಲರಿಗಿಂತ ಅತಿ ಹೆಚ್ಚು ಅಕ್ರಮ ಆಸ್ತಿ ಪತ್ತೆಯಾದ ಬೆಂಗಳೂರು ಗ್ರಾಮಾಂತರ‌ ಜಿಲ್ಲೆಯ‌ ನಿರ್ಮಿತಿ ಕೇಂದ್ರ ಮಾಜಿ ಯೋಜನಾ ನಿರ್ದೇಶಕ ಆರ್.ಎನ್. ವಾಸುದೇವ್​ ಅವರಿಗೆ ಸಂಬಂಧಿಸಿದ ಮತ್ತಷ್ಟು ದಾಖಲೆಗಳ ಪರಿಶೀಲನೆ‌ ಮುಂದುವರೆಸಿದ್ದಾರೆ.

ಕೆಲ ಸರ್ಕಾರಿ ಅಧಿಕಾರಿಗಳ ಬಳಿ ಆದಾಯಕ್ಕಿಂತ ಹೆಚ್ಚು ಆಸ್ತಿ ಪತ್ತೆ ಹಿನ್ನೆಲೆ ಎಸಿಬಿ ತಂಡ ಗಂಭೀರವಾಗಿ ಪರಿಗಣಿಸಿದೆ. ಈ ಮಧ್ಯೆ ಕೆಲ ಅಧಿಕಾರಿಗಳ ಬ್ಯಾಂಕ್ ಖಾತೆಗಳನ್ನ ಜಾಲಾಡುತ್ತಿರುವ ಅಧಿಕಾರಿಗಳು, ಹಣದ ವ್ಯವಹಾರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಕೆಲವರು ಬೆಂಗಳೂರಿನಲ್ಲಿ ಬ್ಯಾಂಕ್ ಖಾತೆಗಳನ್ನ ಹೊಂದಿದ್ದು, ಕಲಬುರಗಿ ಹಾಗೂ ಗದಗ ಸೇರಿದಂತೆ ಕೆಲ ಜಿಲ್ಲೆಗಳಿಂದ ಎಸಿಬಿ ಟೀಂ ಬಂದು, ಬ್ಯಾಂಕ್ ವಹಿವಾಟು ದಾಖಲೆಗಳನ್ನ ಪರಿಶೀಲಿಸಿ ಕ್ರೋಢೀಕರಿಸಿದ್ದಾರೆ. ಈ ಕುರಿತಾಗಿ ಎಸಿಬಿ ಮುಖ್ಯಸ್ಥರಿಗೆ ಅಧಿಕಾರಿಗಳ ಪ್ರತಿಯೊಂದು ತನಿಖಾ ರಿಪೋರ್ಟ್ ಸಲ್ಲಿಸಲಾಗಿದೆ.

ನಿರ್ಮಿತಿ ಕೇಂದ್ರದ ಅಧಿಕಾರಿಯಾಗಿದ್ದ ವಾಸುದೇವ್, ಬೆಂಗಳೂರು ನಗರದಲ್ಲಿ ಮಾತ್ರವಲ್ಲದೆ ಬೆಂಗಳೂರಿನ ಹೊರವಲಯದಲ್ಲೂ ಅಕ್ರಮ ಆಸ್ತಿ ಹೊಂದಿರುವುದು ಪತ್ತೆಯಾಗಿದೆ. ಬೆಂಗಳೂರಿನಲ್ಲೇ ಐದು ಕಟ್ಟಡಗಳಲ್ಲಿ, 28 ಬಾಡಿಗೆ ಮನೆಗಳನ್ನ ಹೊಂದಿದ್ದಾರೆ. ತನ್ನ ಸಂಪಾದನೆಯ ಆದಾಯಕ್ಕಿಂತ ಶೇ.1434 ಅಧಿಕ ಆಸ್ತಿ ಹೊಂದಿರುವ ವಾಸುದೇವ್ ಅವರ ದಾಖಲಾತಿಗಳ ಪರಿಶೀಲನೆ ಮುಂದುವರೆದಿದೆ. ಕೆಂಗೇರಿ ಉಪನಗರ, ಮಲ್ಲೇಶ್ವರ, ನೆಲಮಂಗಲ ಸಿದ್ದಗಂಗಾ ಲೇಔಟ್ ಸೋಂಪುರ ಗ್ರಾಮ, ಹೆಸರಘಟ್ಟ, ಕೆಂಗೇರಿಯಸೂಲಿಗೆರೆ, ಅರ್ಕಾವತಿ ಲೇಔಟ್, ಯಲಹಂಕ, ಜ್ಞಾನಭಾರತಿ ಬಿಡಿಎ ಸೈಟ್, ವಿಶ್ವೇಶ್ವರ ಲೇಔಟ್ ಬಿಡಿಎ ಸೈಟ್, ಹೊಸಕೆರೆಹಳ್ಳಿ ಸೇರಿದಂತೆ 16 ಕಡೆಗಳಲ್ಲಿ ನಿವೇಶನ ಹೊಂದಿರುವುದು ತನಿಖೆ ವೇಳೆ ಬಯಲಾಗಿದೆ.

ಸ್ಥಿರ ಆಸ್ತಿಗಳ ಅಂದಾಜು ಮೌಲ್ಯ ರೂ.26,78 ಕೋಟಿ ಹಾಗೂ ಚರಾಸ್ಥಿ ಮೌಲ್ಯ ಅಂದಾಜು ರೂ.3,87 ಕೋಟಿಯಾಗಿದೆ‌. ಆರೋಪಿತನ ಒಟ್ಟು ಆಸ್ತಿಯು 30.60 ಕೋಟಿಯಾಗಿದ್ದು, ಈ ಪೈಕಿ 29.15 ಕೋಟಿ ಅಕ್ರಮ ಆಸ್ತಿಯ ಪ್ರಮಾಣವು ಶೇ.1408 ರಷ್ಟಾಗಿದೆ. ಆರೋಪಿ ಬಳಿ ಇನ್ನೂ ಹೆಚ್ಚಿನ ಅಕ್ರಮ ಆಸ್ತಿಯು ಕಂಡುಬರುವ ಸಾಧ್ಯತೆ ಇದ್ದು, ತಲಾಶ್​ ಮುಂದುವರೆದಿದೆ. ಸದ್ಯ ಕೆಲ ಅಧಿಕಾರಿಗಳ ಸೂಕ್ತ ದಾಖಲೆಗಳ ಸಲ್ಲಿಕೆಗೆ ಸೂಚಿಸಲಾಗಿದೆ.‌ ಈ ನಡುವೆ ಮುಂದಿನ ಕಾನೂನು ಕ್ರಮಕ್ಕೆ ಎಸಿಬಿ ಅಧಿಕಾರಿಗಳು ತಜ್ಞರ ಸಲಹೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ವಾಸುದೇವ್​ಗೆ ಆಸ್ತಿಯ ವಿವರಗಳು:

1) ಕೆಂಗೇರಿ ಉಪನಗರ ನಂ- 100 ವಾಸದ ಮನೆ

2) ಕೆಂಗೇರಿ ಉಪನಗರ ಶಾಂತಿ ವಿಳಾಸ ಲೇಔಟ್ ನಂ -80

3) ಮಲ್ಲೇಶ್ವರಂ 18 ಕ್ರಾಸ್ ನಂ -04 ವಾಸದ ಮನೆ

4) ಕೆಂಗೇರಿ ಉಪನಗರ ನಂ -167 ವಾಸದ ಮನೆ

5) ನೆಲಮಂಗಲ ಸಿದ್ದಗಂಗಾ ಲೇಔಟ್ ಸೋಂಪುರ ಗ್ರಾಮ ನಂ -49 ಸರ್ವೆ ನಂ 112/2

6) ನೆಲಮಂಗಲ ಸಿದ್ದಗಂಗಾ ಲೇಔಟ್ ಸೋಂಪುರ ಗ್ರಾಮ ಸಂಖ್ಯೆ -50 ಸರ್ವೇನಂ-111/2

7) ನೆಲಮಂಗಲ ಸಿದ್ದಗಂಗಾ ಲೇಔಟ್ ಸೋಂಪುರ ಗ್ರಾಮ ಸಂಖ್ಯೆ -32 ಸರ್ವೇ ನಂ 111/2

8) ಹೆಸರಘಟ್ಟ ಸರ್ವೇನಂ 276/2/5

9) ಕೆಂಗೇರಿ ಸೂಲಿಗೆರೆ ಗ್ರಾಮ ಸರ್ವೇನಂ1/3/4

10) ಅರ್ಕಾವತಿ ಲೇಔಟ್ ನಲ್ಲಿ ಒಟ್ಟು ಮೂರು ಸೈಟ್ ಗಳು ನಿವೇಶನ ಸಂಖ್ಯೆ2477/ 2303/2596

11) ಯಲಹಂಕ 44/80 ಸರ್ವೇ ನಂ 1163

12) ಕೆಂಗೇರಿ ಉಪನಗರ ಕೆಹೆಚ್ ಬಿ ಕಾಲೋನಿ ನಂ-113

13) ಜ್ಞಾನಭಾರತಿ ಬಿಡಿಎ ಸೈಟ್ ಸೈಟ್ ನಂ-11

14) ವಿಶ್ವೇಶ್ವರ ಲೇಔಟ್ ಬಿಡಿಎ ಸೈಟ್ ನಂ-340

15 ) ವಿಶ್ವೇಶ್ವರ ಲೇಔಟ್ ನಲ್ಲಿ ಎರಡು ಸಂಖ್ಯೆ 2807

16) ಹೊಸಕೇರೆಹಳ್ಳಿ ಅಪಾರ್ಟ್ಮೆಂಟ್ ಫ್ಲಾಟ್​ ನಂ-804

17)ಕೆಂಗೇರಿ ಉಪನಗರ ವಾರ್ಡ್ ನಂ- 159 ನಿವೇಶನ ಸಂಖ್ಯೆ -37

Leave a Reply

Your email address will not be published. Required fields are marked *

error: Content is protected !!