40 ಪರ್ಸೆಂಟ್ ಸರ್ಕಾರಕ್ಕೆ ಪ್ರತಿಯೊಂದು ಕೆಲಸಕ್ಕೂ ಹೈಕೋರ್ಟ್ ಚಾಟಿ ಬೀಸಬೇಕಾಗಿದೆ- ಕಾಂಗ್ರೆಸ್
ಬೆಂಗಳೂರು, ನ.27: ಕೆಲಸ ಮಾಡದ ಬಿಜೆಪಿ ಸರ್ಕಾರ. ಸರ್ಕಾರ ಸರಿಯಾಗಿ ಕೆಲಸ ಮಾಡುತ್ತಿದ್ದರೆ ಇಷ್ಟೊಂದು ಕೇಸು ಬರುತ್ತಿರಲಿಲ್ಲ. ದಪ್ಪ ಚರ್ಮದ 40% ಬಿಜೆಪಿ ಸರ್ಕಾರಕ್ಕೆ ಪ್ರತಿಯೊಂದು ಕೆಲಸಕ್ಕೂ ಹೈಕೋರ್ಟ್ ಚಾಟಿ ಬೀಸಬೇಕಾಗಿ ಬಂದಿದೆ ಎಂದು ಕಾಂಗ್ರೆಸ್ ಕಿಡಿಕಾರಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, “ಹೈಕೋರ್ಟ್ ಮತ್ತೊಮ್ಮೆ ಬಿಜೆಪಿಯ ನಿರ್ಲಜ್ಜ ಸರ್ಕಾರಕ್ಕೆ ಚಾಟಿ ಬೀಸಿದೆ. ಕೋವಿಡ್ ನಿರ್ವಹಣೆ, ಲಸಿಕೆ ಅಭಿಯಾನ, ಬಿಬಿಎಂಪಿಯ ಬೇಜವಾಬ್ದಾರಿತನ ಸೇರಿದಂತೆ ಪ್ರತಿಯೊಂದಕ್ಕೂ ಹೈಕೋರ್ಟ್ ಸರ್ಕಾರಕ್ಕೆ ತಿವಿದು ಕೆಲಸ ಮಾಡಿಸಬೇಕಾಗಿ ಬಂದಿದ್ದು 40% ಕಮಿಷನ್ ಸರ್ಕಾರದ ದುರಾಡಳಿತ, ನಿಷ್ಕ್ರೀಯತೆಗೆ ಸಾಕ್ಷಿ ಈ ಚೆಂದಕ್ಕೆ ಬಿಜೆಪಿಗೆ ಅಧಿಕಾರ ಏಕೆ ಬೇಕು?” ಎಂದು ಪ್ರಶ್ನಿಸಿದೆ.”ಕೆಲಸ ಮಾಡದ ಬಿಜೆಪಿ ಸರ್ಕಾರ. ಸರ್ಕಾರ ಸರಿಯಾಗಿ ಕೆಲಸ ಮಾಡುತ್ತಿದ್ದರೆ ಇಷ್ಟೊಂದು ಕೇಸು ಬರುತ್ತಿರಲಿಲ್ಲ. ದಪ್ಪ ಚರ್ಮದ 40% ಬಿಜೆಪಿ ಸರ್ಕಾರಕ್ಕೆ ಪ್ರತಿಯೊಂದು ಕೆಲಸಕ್ಕೂ ಹೈಕೋರ್ಟ್ ಚಾಟಿ ಬೀಸಬೇಕಾಗಿ ಬಂದಿದೆ. ಬೊಮ್ಮಾಯಿಯವರೇ ನಿಮ್ಮದು ನಿಷ್ಕ್ರಿಯ ಸರ್ಕಾರ ಎನ್ನಲು ಇನ್ನೇನು ಬೇಕು!” ಎಂದಿದೆ.
ಅಂತರರಾಷ್ಟ್ರೀಯ ಮಟ್ಟದ ಬಹುದೊಡ್ಡ ಹಗರಣದ ಪ್ರಮುಖ ಆರೋಪಿಯ ಸುಳಿವಿಲ್ಲವಂತೆ ಪೊಲೀಸರಿಗೆ! ಬಿಜೆಪಿ ಆಡಳಿತದ ಪೊಲೀಸ್ ವ್ಯವಸ್ಥೆಗೆ ಇದು ನಾಚಿಕೆಗೇಡಿನ ಸಂಗತಿ. ಆರೋಪಿ ನಿಜಕ್ಕೂ ನಾಪತ್ತೆಯಾಗಿದ್ದಾನೋ? ಸರ್ಕಾರವೇ ಆತನನ್ನು ಅಡಗಿಸಿದೆಯೋ. ಆತನ ಜೀವಕ್ಕೆ ಅಪಾಯವಿರುವ ಆತಂಕದ ನಡುವೆ ಆತನ ಕಣ್ಮರೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದೆ” ಎಂದು ಹೇಳಿದೆ.”ಬಿಟ್ ಕಾಯಿನ್ ಹಗರಣವನ್ನು ಬಿಟ್ ಹಾಕುವ ಯತ್ನದಲ್ಲಿ ಭ್ರಷ್ಟ ಬಿಜೆಪಿ. ಅಂತರಾಷ್ಟ್ರೀಯ ಮಟ್ಟದ ಹಗರಣದ ಆರೋಪಿಯನ್ನು ಏಕೆ ಬಿಟ್ಟಿರಿ?. ಆತನನ್ನು ಬಿಜೆಪಿಯೇ ಅಡಗಿಸಿದೆಯೇ?. ಆತನೇ ಅಡಗಿದನೇ?” ಎಂದು ಕೇಳಿದೆ.”ಬಿಜೆಪಿ ಸರ್ಕಾರದಲ್ಲಿ ರೈತಾಪಿ ವರ್ಗ ಬದುಕಲಾರದ ಸ್ಥಿತಿಗೆ ತಲುಪಿದೆ, ಒಂದು ಕಡೆ ರೈತ ವಿರೋಧಿ ಧೋರಣೆಯ ಸರ್ಕಾರದ ಅನೀತಿಗಳು, ಮತ್ತೊಂದು ಕಡೆ ನೈಸರ್ಗಿಕ ವಿಕೋಪಗಳಿಂದ ರೈತರು ಜರ್ಜರಿತರಾಗಿದ್ದಾರೆ. ಬಿಜೆಪಿಗೆ ನಿಜಕ್ಕೂ ರೈತಪರ ಕಾಳಜಿ ಇದ್ದರೆ ಕಳೆದ ಮೂರು ವರ್ಷದಿಂದ ನಿರಂತರ ನಷ್ಟ ಅನುಭವಿಸಿದ ರೈತರಿಗೆ ವಿಶೇಷ ಪ್ಯಾಕೇಜ್ ನೆರವು ಘೋಷಿಸಲಿ” ಎಂದು ಆಗ್ರಹಿಸಿದೆ.