ಮಂಗಳೂರು: ನಿಯಮ ಉಲ್ಲಂಘನೆ ಆರೋಪ- ಮತ್ತೆ ಪಬ್’ಗಳಿಗೆ ದಾಳಿ
ಮಂಗಳೂರು, ಅ.29: ಕೋವಿಡ್ ನಿಯಮ ಉಲ್ಲಂಘನೆ ಆರೋಪದ ಮೇಲೆ ಮಂಗಳೂರು ನಗರದಲ್ಲಿರುವ ಪಬ್ ಗಳಿಗೆ ನಿನ್ನೆ ರಾತ್ರಿ ಪೊಲೀಸರು ಧಿಡೀರ್ ದಾಳಿ ನಡೆಸಿದ್ದಾರೆ.
ಪಬ್‍ಗಳಲ್ಲಿ ಕೋವಿಡ್ ನಿಯಮ ಪಾಲಿಸಲಾಗುತ್ತಿಲ್ಲ. ಪಬ್‍ನೊಳಗೆ ಬೆಳಕಿನ ವ್ಯವಸ್ಥೆ ಸೇರಿದಂತೆ ಕೆಲವೊಂದು ನಿಯಮಗಳನ್ನು ಗಾಳಿಗೆ ತೂರಿ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ಸಾರ್ವಜನಿಕರಿಂದ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ. ಪಬ್‍ಗಳಿಗೆ ಹಠಾತ್ ದಾಳಿ ನಡೆಸಿದ ಪೊಲೀಸರು ತಪಾಸಣೆ ನಡೆಸಿದ್ದು, ಪಬ್ ನ ಮೇಲ್ವಿಚಾರಕರಿಗೆ ಹಾಗೂ ಸಿಬ್ಬಂದಿಗಳಿಗೆ ಖಡಕ್ ನಿರ್ದೇಶನ ನೀಡಿದ್ದಾರೆಂದು ತಿಳಿದು ಬಂದಿದೆ.