ಕಡಿಯಾಳಿ: ಚಂದ್ರಕಲಾ ಪೈ ನಿಧನ

ಉಡುಪಿ: ಕಡಿಯಾಳಿ ಮುಖ್ಯರಸ್ತೆಯ ನಿವಾಸಿ ದಿವಂಗತ ಎಂ. ಗೋಕುಲ್ ದಾಸ್ ಪೈ ಪತ್ನಿ ಯು. ಚಂದ್ರಕಲಾ ಪೈ (78) ಅಲ್ಪಕಾಲದ ಅನಾರೋಗ್ಯದಿಂದ ಇಂದು ನಿಧನ ಹೊಂದಿದರು.

ಇವರು ಕಡಿಯಾಳಿ ಶ್ರೀ ಮಹಿಷಮರ್ಧಿನಿ ದೇವಸ್ಥಾನ, ಉಡುಪಿ ಲಕ್ಷ್ಮೀ ವೆಂಕಟರಮಣ ದೇವಸ್ಥಾನ ಮತ್ತು ಬಸ್ರೂರು ಮಹಾಲಸ ದೇವಸ್ಥಾನಗಳಿಗೆ ದೇವರ ಪೂಜೆಗೆ ಬತ್ತಿ, ಅಲಂಕಾರದ ಕಲಾತ್ಮಕ ಹೂಮಾಲೆ ತಯಾರಿಸಿ ಸೇವೆ ಮಾಡುತ್ತಿದ್ದರು. ಇವರು ಎಂಜಿ ಎಂ ಕಾಲೇಜ್ ಕಂಪ್ಯೂಟರ್ ಸಾಯನ್ಸ್ ವಿಭಾಗದ ಮುಖ್ಯಸ್ಥ ಪ್ರೊಫೆಸರ್ ವಿಶ್ವನಾಥ್ ಪೈ  ಸಹಿತ 3 ಗಂಡು ಮಕ್ಕಳನ್ನು ಹಾಗೂ  ಅಪಾರ ಕುಟುಂಬವರ್ಗದವರನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಉಡುಪಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಕಡಿಯಾಳಿ, ಮತ್ತು ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಕೆ ರಾಘವೇಂದ್ರ ಕಿಣಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!